ಸುಳ್ಯ: ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ದ.ಕ. ಪೆರಾಜೆ ಘಟಕದ ವಾರ್ಷಿಕ ಮಹಾಸಭೆ ಭಾನುವಾರ ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.
ಘಟಕದ ಅಧ್ಯಕ್ಷ ಚಂದ್ರಶೇಖರ ಪಿ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್., ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ ರವಿ ಎಸ್., ಸಂಘದ ಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಪಿ. ಪೈಚಾರ್ ಹಾಗೂ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಗೌರವ ಉಪಸ್ಥಿತರಿದ್ದರು. ಕುಮಾರಿಯರಾದ ಅನನ್ಯ ಕೆ.ಪಿ., ಭಾಮಿನಿ ಕೆ.ಪಿ. ಮತ್ತು ಕುಶಲ್ಯ ಪಿ.ಡಿ. ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಇದನ್ನೂ ಓದಿ: ಸಿದ್ದಕಟ್ಟೆಯಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 23ನೇ ಶಾಖೆ ಉದ್ಘಾಟನೆ
ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಘಟಕದ ಅಧ್ಯಕ್ಷರಾಗಿ ಚಂದ್ರಶೇಖರ ಪಿ.ಕೆ. ಕೋಡ್ಯಗುಂಡಿ, ಕಾರ್ಯದರ್ಶಿಯಾಗಿ ಪುರುಷೋತ್ತಮ ಕಂಜಿಪಿಲಿ, ಕೋಶಾಧಿಕಾರಿಯಾಗಿ ಅಶ್ರಫ್ ಪಿ.ಎಂ. ಹಾಗೂ ಉಪಾಧ್ಯಕ್ಷರಾಗಿ ಅಬೂಬಕ್ಕರ್ ಪಿ.ಎಂ. ಆಯ್ಕೆಯಾದರು. ನಿರ್ದೇಶಕರಾಗಿ ವೇಣುಗೋಪಾಲ ದೇವಮೂಲೆ, ಹರ್ಷಿತ್ ಮಜಿಕ್ಕೋಡಿ ಮತ್ತು ರಾಮ್ ಪ್ರಸಾದ್ ಮೂಲೆ ಮಜಲು ಆಯ್ಕೆಯಾದರು.
ಅಬೂಬಕ್ಕರ್ ಪಿ.ಎಂ. ಸ್ವಾಗತಿಸಿ, ಹರ್ಷಿತ್ ಮಜಿಕ್ಕೋಡಿ ವಂದಿಸಿದರು. ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

