Breaking News

ಭಾರತದ ಜಿಡಿಪಿ ದರ ಶೇ. 7.8 ಕ್ಕೆ ಏರಿಕೆ: ನರೇಂದ್ರ ಮೋದಿ ಸಂತಸ, ಟೀಕಾಕಾರರಿಗೆ ಪ್ರಧಾನಿ ತಿರುಗೇಟು

ದೆಹಲಿ: 2026-27 ಸಾಲಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಭಾರತವು ಬರೋಬ್ಬರಿ ಶೇ. 7.8 ರಷ್ಟು ಜಿಡಿಪಿ (GDP) ಪ್ರಗತಿ ಸಾಧಿಸಿದ್ದು, ಇದು ಅತ್ಯಂತ ಐತಿಹಾಸಿಕ ಮತ್ತು ದೈತ್ಯ ಸಾಧನೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘X’ (ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಜಾಗತಿಕ ಅನಿಶ್ಚಿತತೆಗಳು ಹಾಗೂ ದೇಶದ ಆರ್ಥಿಕ ಪ್ರಗತಿಯ ಕುರಿತು ಮಾತನಾಡಿದ್ದಾರೆ. 2026-27ರ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದಲ್ಲಿ (Q1) ಶೇ. ೭.೮ ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಿರುವುದು ದೇಶದ ಆರ್ಥಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

 

View this post on Instagram

 

A post shared by Narendra Modi (@narendramodi)

ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಹಾಗೂ ಪೂರೈಕೆ ಜಾಲದ (Supply Chain) ಸಮಸ್ಯೆಗಳು ಸೇರಿದಂತೆ ಹಲವು ಅನಿಶ್ಚಿತತೆಗಳಿದ್ದರೂ, ದೇಶದ ಜನರ ಸಾಮೂಹಿಕ ಶಕ್ತಿಯಿಂದಾಗಿ ಭಾರತ ಈ ಮಹತ್ತರ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗಿದೆ.

ಇದನ್ನೂ ಓದಿ: “ಇಸ್ಲಾಂ ಅತ್ಯಂತ ಶ್ರೇಷ್ಠ ಧರ್ಮ, ನನಗೆ ಹಜ್‌ ಯಾತ್ರೆಗೆ ಹೋಗುವ ಆಸೆ ಇದೆ”: ಸಚಿವ ಬಸವರಾಜ ರಾಯರೆಡ್ಡಿ

ಭಾರತದ ಅಭಿವೃದ್ಧಿಯನ್ನು ಅನುಮಾನಿಸುವ ಹಾಗೂ ನಕಾರಾತ್ಮಕವಾಗಿ ಮಾತನಾಡುವವರ ಮಾತುಗಳು ಸುಳ್ಳಾಗಿದ್ದು, ಭಾರತವು ಮತ್ತೊಮ್ಮೆ ಪ್ರಗತಿಯ ಹಾದಿಯಲ್ಲಿ ಮುನ್ನಡೆದಿದೆ (Doomsayers were doomed and India bloomed…yet again!) ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *