ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀಕೃಷ್ಣನ ಜನ್ಮದಿನವಾದ ‘ಶ್ರೀಕೃಷ್ಣ ಜನ್ಮಾಷ್ಟಮಿ’ಯನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತದೆ. 2026 ರ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 4 ರಂದು ಆಚರಿಸಲಾಗುತ್ತಿದ್ದು, ಮಧ್ಯರಾತ್ರಿಯ ನಿಶಿತ ಕಾಲದಲ್ಲಿ (Nishita Kaal) ಬಾಲಕೃಷ್ಣನನ್ನು ಪೂಜಿಸುವುದು ಈ ಹಬ್ಬದ ಮುಖ್ಯ ಸಂಪ್ರದಾಯವಾಗಿದೆ. ನೊಯ್ಡಾ ಹಾಗೂ ರಾಜಧಾನಿ ದೆಹಲಿ ಸುತ್ತಮುತ್ತ ನಿಶಿತ ಪೂಜಾ ಮುಹೂರ್ತವು ಸೆಪ್ಟೆಂಬರ್ ೪ ರ ರಾತ್ರಿ 11.57 ರಿಂದ ಸೆಪ್ಟೆಂಬರ್ ೫ ರ ಮಧ್ಯರಾತ್ರಿ ೧೨:೪೨ ರವರೆಗೆ ಇರಲಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಪೂಜಾ ವಿಧಿ-ವಿಧಾನ (ಹಂತ ಹಂತವಾಗಿ):
೧. ಪೂಜಾ ಸ್ಥಳದ ಸ್ವಚ್ಛತೆ:
ಸಾಂಬ್ರಾಣಿ ಧೂಪ ಹಾಕಿ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ, ಪೂಜಾ ಪೀಠದ ಮೇಲೆ ಶುಭ್ರವಾದ ವಸ್ತ್ರವನ್ನು ಹಾಸಿ. ಮಧ್ಯಭಾಗದಲ್ಲಿ ಬಾಲಕೃಷ್ಣನ ವಿಗ್ರಹ ಅಥವಾ ಚಿತ್ರಪಟವನ್ನು ಇರಿಸಿ. ಹೂವುಗಳು, ದೀಪಗಳು ಹಾಗೂ ಲಡ್ಡು ಗೋಪಾಲನಿಗೆ ಪುಟ್ಟ ಉಯ್ಯಾಲೆಯನ್ನು (Jhula) ಜೋಡಿಸಿ ಅಲಂಕರಿಸಬಹುದು.
೨. ಸಂಕಲ್ಪ ಮತ್ತು ಸಿದ್ಧತೆ:
ಸಾಲು ದೀಪ ಬೆಳಗಿಸುವ ಮುನ್ನ ಜಲಪ್ರೋಕ್ಷಣೆ ಮಾಡಿ, ಸ್ವಚ್ಛ ವಸ್ತ್ರ ಧರಿಸಿ ಪೂಜೆಗೆ ಸಿದ್ಧರಾಗಿ. ವ್ರತ ಆಚರಿಸುವ ಭಕ್ತರು ತಮ್ಮ ಸಂಪ್ರದಾಯದಂತೆ ಪೂಜಾ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಂಡು ವ್ರತದ ಸಂಕಲ್ಪ ಮಾಡಬೇಕು.
೩. ಗಣೇಶ ಪೂಜೆಯಿಂದ ಚಾಲನೆ:
ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಮೊದಲು ವಿಘ್ನನಿವಾರಕ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿ, ಹೂವು ಹಾಗೂ ನೀರನ್ನು ಅರ್ಪಿಸಿ ಆಶೀರ್ವಾದ ಪಡೆಯಬೇಕು.
೪. ಬಾಲಕೃಷ್ಣನಿಗೆ ಅಭಿಷೇಕ ಹಾಗೂ ಅಲಂಕಾರ:
ಬಾಲಕೃಷ್ಣನ ವಿಗ್ರಹಕ್ಕೆ ಪಂಚಾಮೃತ (ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ) ಹಾಗೂ ಶುದ್ಧ ನೀರಿನಿಂದ ಅಭಿಷೇಕ ನೆರವೇರಿಸಿ. ನಂತರ ಹೊಸ ವಸ್ತ್ರಗಳನ್ನು ತೊಡಿಸಿ, ಒಡವೆಗಳಿಂದ ಸಿಂಗರಿಸಿ ಪೀಠದ ಮೇಲೆ ಕುಳ್ಳಿರಿಸಬೇಕು.
೫. ನೈವೇದ್ಯ ಹಾಗೂ ತುಳಸಿ ಸಮರ್ಪಣೆ:
ಕೃಷ್ಣನಿಗೆ ಪ್ರಿಯವಾದ ಫಲ-ಪುಷ್ಪಗಳು, ಬೆಣ್ಣೆ, ಸಿಹಿ ತಿಂಡಿಗಳು ಹಾಗೂ ಹಾಲಿನಿಂದ ಮಾಡಿದ ಖಾದ್ಯಗಳನ್ನು ನೈವೇದ್ಯವಾಗಿ ಇಡಬೇಕು. ಶ್ರೀಕೃಷ್ಣನ ಪೂಜೆಯಲ್ಲಿ ತುಳಸಿ ದಳಗಳು ಅತ್ಯಂತ ಪ್ರಮುಖವಾಗಿದ್ದು, ಭಕ್ತಿಯಿಂದ ನೈವೇದ್ಯದೊಂದಿಗೆ ತುಳಸಿಯನ್ನು ಅರ್ಪಿಸಬೇಕು.
೬. ಮಧ್ಯರಾತ್ರಿಯ ನಿಶಿತ ಪೂಜೆ:
ಶ್ರೀಕೃಷ್ಣನು ಹುಟ್ಟಿದ ಕ್ಷಣವಾದ ನಿಶಿತ ಕಾಲದಲ್ಲಿ (ರಾತ್ರಿ ೧೧:೫೭ ರಿಂದ ೧೨:೪೨) ಬಾಲ ಗೋಪಾಲನನ್ನು ಸ್ವಾಗತಿಸುತ್ತಾ ಭಜನೆ, ಕೀರ್ತನೆ ಹಾಗೂ ಮಂತ್ರ ಪಠಣಗಳೊಂದಿಗೆ ಪ್ರಮುಖ ಪೂಜೆಯನ್ನು ನೆರವೇರಿಸಲಾಗುತ್ತದೆ.
೭. ಆರತಿ ಹಾಗೂ ಕೃಷ್ಣ ನಾಮಸ್ಮರಣೆ:
ಮುಖ್ಯ ನೈವೇದ್ಯಗಳ ನಂತರ ಕೃಷ್ಣನಿಗೆ ಮಂಗಳಾರತಿ ಎತ್ತಿ, ಕುಟುಂಬ ಸಮೇತರಾಗಿ ಕೃಷ್ಣನ ಸ್ತೋತ್ರಗಳನ್ನು ಪಠಿಸಬೇಕು.
ಇದನ್ನೂ ಓದಿ: ದಿನಭವಿಷ್ಯ: ಇಂದು ನಿಮ್ಮ ರಾಶಿಫಲ ಹೇಗಿರಲಿದೆ? ಇಲ್ಲಿದೆ ಸಂಪೂರ್ಣ ವಿವರ
ಪಾರಣೆ (Parana) ನಿಯಮಗಳು:
ಪೂಜೆ ಮತ್ತು ವ್ರತದ ಮುಕ್ತಾಯದ ಸಮಯಗಳು ಒಂದೇ ಆಗಿರಬೇಕಿಲ್ಲ. 2026 ರ ಧರ್ಮಶಾಸ್ತ್ರದ ಪ್ರಕಾರ, ಸೆಪ್ಟೆಂಬರ್ ೫ ರ ಸೂರ್ಯೋದಯಕ್ಕೆ ಮುನ್ನವೇ ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರ ಮುಕ್ತಾಯಗೊಳ್ಳುವುದರಿಂದ ಬೆಳಿಗ್ಗೆ ೬:೦೧ ರ ನಂತರ ಪಾರಣೆ (ವ್ರತ ಬಿಡುವುದು) ಮಾಡುವುದು ಸೂಕ್ತ.
ಕೆಲವು ಸಂಪ್ರದಾಯಗಳ ಪ್ರಕಾರ, ಮಧ್ಯರಾತ್ರಿಯ ನಿಶಿತ ಪೂಜೆ ಮುಗಿದ ನಂತರ (ರಾತ್ರಿ 12;42 ರ ಬಳಿಕ) ಪಾರಣೆ ಮಾಡಲಾಗುತ್ತದೆ. ಭಕ್ತರು ತಮ್ಮ ಕುಟುಂಬದ ಸಂಪ್ರದಾಯ ಮತ್ತು ಸ್ಥಳೀಯ ಪಂಚಾಂಗದ ಪ್ರಕಾರ ಪಾರಣೆ ನಿಯಮಗಳನ್ನು ಅನುಸರಿಸಬಹುದು. ಮನಸ್ಸಿನಲ್ಲಿ ಯಾವುದೇ ಆಡಂಬರವಿಲ್ಲದೆ ಶುದ್ಧ ಭಕ್ತಿ, ಪ್ರೀತಿ ಮತ್ತು ಶ್ರದ್ಧೆಯಿಂದ ಕೃಷ್ಣನನ್ನು ಸ್ಮರಿಸುವುದೇ ಜನ್ಮಾಷ್ಟಮಿ ಪೂಜೆಯ ನಿಜವಾದ ಸಾರ್ಥಕತೆಯಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

