Breaking News

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ ಬಿಡುಗಡೆ: ಮಂಚಿ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ ವಿಜಯಲಕ್ಷ್ಮಿ, ವಿಟ್ಲ ಪಿಎಂಶ್ರೀ ಪ್ರೌಢಶಾಲೆಯ ವಿದ್ಯಾಶಂಕರ್ ಅವರಿಗೆ ಒಲಿದ ಪ್ರಶಸ್ತಿ

ಮಂಗಳೂರು: ಶಿಕ್ಷಕರ ದಿನಾಚರಣೆಯ ಮುನ್ನಾದಿನ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯು (ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ) 2026-27ನೇ ಸಾಲಿನ ಜಿಲ್ಲಾ ಮಟ್ಟದ ‘ಉತ್ತಮ ಶಿಕ್ಷಕ ಪ್ರಶಸ್ತಿ’ ಗೆ ಆಯ್ಕೆಯಾದ ಶಿಕ್ಷಕರ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ.

ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ಶೈಕ್ಷಣಿಕ ಸೇವೆ ಸಲ್ಲಿಸಿದ ಜಿಲ್ಲೆಯ ವಿವಿಧ ತಾಲೂಕುಗಳ ಪ್ರಭಾವಿ ಶಿಕ್ಷಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಿರಿಯ ಪ್ರಾಥಮಿಕ ವಿಭಾಗ

ಬಂಟ್ವಾಳ: ದಾಮೋದರ, ಸಹಶಿಕ್ಷಕರು – ಸ.ಕಿ.ಪ್ರಾ.ಶಾಲೆ ಸೇರ್ಕಳ, ಬಂಟ್ವಾಳ

ಬೆಳ್ತಂಗಡಿ: ಚಿತ್ರಪ್ರಭಾ, ಸಹಶಿಕ್ಷಕರು – ಸ.ಕಿ.ಪ್ರಾ.ಶಾಲೆ ಮುಂಡ್ರುಪಾಡಿ, ಬೆಳ್ತಂಗಡಿ

ಮಂಗಳೂರು ಉತ್ತರ: ಉಮಾಲಕ್ಷ್ಮೀ, ಸಹಶಿಕ್ಷಕರು – ಸ.ಹಿ.ಪ್ರಾ.ಶಾಲೆ ಸ್ಕ್ಯಾಂಡ್ ಪೀಟ್, ಮಂಗಳೂರು

ಮಂಗಳೂರು ದಕ್ಷಿಣ: ಫ್ಲೇವೈ ಜೆಸಿಂತಾ ಮಿರಾಂದ, ಸಹಶಿಕ್ಷಕರು – ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬದ್ರಿಯಾನಗರ, ಮಂಗಳೂರು

ಮೂಡಬಿದ್ರೆ: ಶ್ರೀವಾಣಿ, ಸಹಶಿಕ್ಷಕರು – ಸ.ಹಿ.ಪ್ರಾ.ಶಾಲೆ ಪಂಚಾರು, ಮೂಡಬಿದ್ರೆ

ಪುತ್ತೂರು: ಮಾಲತಿ, ಸಹಶಿಕ್ಷಕರು – ಸ.ಕಿ.ಪ್ರಾ.ಶಾಲೆ ಹೊಸೋಟೆ, ಪುತ್ತೂರು

ಸುಳ್ಯ: ಯಶೋಧರ ಕೆ., ಸಹಶಿಕ್ಷಕರು – ಸ.ಕಿ.ಪ್ರಾ.ಶಾಲೆ ಪಾಂಡಿಗದ್ದೆ, ಸುಳ್ಯ

ಹಿರಿಯ ಪ್ರಾಥಮಿಕ ವಿಭಾಗ

ಬಂಟ್ವಾಳ: ವಿದ್ಯಾಶಂಕರ್ ಡಿ., ಸಹಶಿಕ್ಷಕರು – ಪಿ.ಎಂ.ಶ್ರೀ ಸರ್ಕಾರಿ ಪ್ರೌಢಶಾಲೆ ವಿಟ್ಲ (ಪ್ರಾಥಮಿಕ ವಿಭಾಗ), ಬಂಟ್ವಾಳ

ಬೆಳ್ತಂಗಡಿ: ಕೃಷ್ಣಪ್ಪ ಪೂಜಾರಿ, ಮುಖ್ಯ ಶಿಕ್ಷಕರು – ಸ.ಹಿ.ಪ್ರಾ.ಶಾಲೆ ಅಂಡೆತ್ತಡ್ಕ, ಬೆಳ್ತಂಗಡಿ

ಮಂಗಳೂರು ಉತ್ತರ: ಇಂದಿರಾ ಎಸ್. (ಜಿ.ಪಿ.ಟಿ), ಸಹಶಿಕ್ಷಕರು – ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಾಟಿಪಳ್ಳ-03, ಮಂಗಳೂರು

ಮಂಗಳೂರು ದಕ್ಷಿಣ: ಹರೀಶ್ ಕುಮಾರ್ ಬಿ.ಎಂ., ಸಹಶಿಕ್ಷಕರು – ಸ.ಉ.ಹಿ.ಪ್ರಾ.ಶಾಲೆ ಉಚ್ಚಿಲಗುಡ್ಡೆ, ಮಂಗಳೂರು

ಮೂಡಬಿದ್ರೆ: ಸುಕುಮಾರ್, ಸಹಶಿಕ್ಷಕರು – ಸ.ಹಿ.ಪ್ರಾ.ಶಾಲೆ ಪುಚ್ಚಮೊಗರು, ಮೂಡಬಿದ್ರೆ

ಪುತ್ತೂರು: ಮರಿಯಾ, ಸಹಶಿಕ್ಷಕರು – ಸ.ಹಿ.ಪ್ರಾ.ಶಾಲೆ ಸಾಮೆತ್ತಡ್ಕ, ಪುತ್ತೂರು

ಸುಳ್ಯ: ಭುವನೇಶ್ವರಿ ಕೆ., ಸಹಶಿಕ್ಷಕರು – ಸ.ಹಿ.ಪ್ರಾ.ಶಾಲೆ ಎಣ್ಮೂರು, ಸುಳ್ಯ

ಇದನ್ನೂ ಓದಿ: ಬೆಂಗಳೂರು ಸುರಂಗ ರಸ್ತೆ ಯೋಜನೆಗೆ ಪ್ರಶಂಸೆ, ಬೆಂಬಲಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ

ಪ್ರೌಢಶಾಲಾ ವಿಭಾಗ

ಬಂಟ್ವಾಳ: ವಿಜಯಲಕ್ಷ್ಮಿ ಕೆ., ಸಹಶಿಕ್ಷಕರು – ಸರ್ಕಾರಿ ಪ್ರೌಢಶಾಲೆ ಮಂಚಿಕೊಪ್ಪಲು, ಬಂಟ್ವಾಳ

ಬೆಳ್ತಂಗಡಿ: ರವೀಂದ್ರ ಕೆ., ಸಹಶಿಕ್ಷಕರು – ಸ.ಪ.ಪೂ.ಕಾಲೇಜು (ಪ್ರೌಢಶಾಲೆ) ಬೆಳಾಲು, ಬೆಳ್ತಂಗಡಿ

ಮಂಗಳೂರು ಉತ್ತರ: ಪ್ರವೀಣ್ ಕುಮಾರ್, ಸಹಶಿಕ್ಷಕರು – ಸಂತ ಅಲೋಶಿಯಸ್ ಪ್ರೌಢಶಾಲೆ ಕೋಡಿಯಾಲ್‌ಬೈಲ್, ಮಂಗಳೂರು

ಮಂಗಳೂರು ದಕ್ಷಿಣ: ಶಶಿಕಾಂತ್, ದೈಹಿಕ ಶಿಕ್ಷಕರು – ಸರ್ಕಾರಿ ಪ್ರೌಢಶಾಲೆ ಮುಂಡೋಳಿ, ಮಂಗಳೂರು

ಮೂಡಬಿದ್ರೆ: ಜೋಸೆಫ್ ರೊನಾಲ್ಡ್ ರೋಸಾರಿಯೋ, ಸಹಶಿಕ್ಷಕರು – ಸರ್ಕಾರಿ ಪ್ರೌಢಶಾಲೆ ಮೂಡುಮಾರ್ನಾಡು, ಮೂಡಬಿದ್ರೆ

ಪುತ್ತೂರು: ಕೆ.ರಮೇಶ್ ಎಂ., ಸಹಶಿಕ್ಷಕರು – ಸಂತ ಜಾರ್ಜ್ ಪ್ರೌಢಶಾಲೆ ನೆಲ್ಲಿಕಟ್ಟೆ, ಪುತ್ತೂರು

ಸುಳ್ಯ: ಶರಣ್ ಕುಮಾರ್, ಸಹಶಿಕ್ಷಕರು – ಸ.ಪ.ಪೂ.ಕಾಲೇಜು (ಪ್ರೌಢಶಾಲೆ) ಅರಂತೋಡು, ಸುಳ್ಯ

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *