ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಆಡಳಿತದಲ್ಲಿ ಸಾರ್ವಜನಿಕ ಕೆಲಸಗಳಿಗೆ ಲಂಚದ ಬೇಡಿಕೆ, ಖಾತಾ ಬದಲಾವಣೆ ವಿಳಂಬ ಮತ್ತು ಸರ್ಕಾರದ ಅನುದಾನ ದುರ್ಬಳಕೆ ಕುರಿತು ನಿರಂತರ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಲೋಕಾಯುಕ್ತ ಪೊಲೀಸರು, ಜಿಲ್ಲೆಯ ಪ್ರಮುಖ 7 ಗ್ರಾಮ ಪಂಚಾಯತಿ ಕಚೇರಿಗಳ ಮೇಲೆ ಏಕಕಾಲಕ್ಕೆ ಮುಗಿಬಿದ್ದು ದಿಢೀರ್ ಸಮಗ್ರ ಪರಿಶೀಲನೆ ನಡೆಸಿದ್ದಾರೆ.
ಯಾವ್ಯಾವ ಪಂಚಾಯತ್‌ಗಳ ಮೇಲೆ ದಾಳಿ?
ಮಂಗಳೂರು, ಉಡುಪಿ ಹಾಗೂ ಕಾರವಾರ ವಿಭಾಗಗಳ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ ಈ ಕೆಳಗಿನ ಪಂಚಾಯತಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ:
ಮಂಗಳೂರು ತಾಲೂಕು: ಪೆರ್ಮುದೆ ಗ್ರಾಮ ಪಂಚಾಯತಿ
ಬಂಟ್ವಾಳ ತಾಲೂಕು: ಪುದು, ಮಾಣಿ, ಗೊಳ್ತಮಜಲು ಹಾಗೂ ಪಾಣೆಮಂಗಳೂರು/ಅಡ್ಯಾರ್ ಗ್ರಾಮ ಪಂಚಾಯತಿಗಳು
ಬೆಳ್ತಂಗಡಿ ತಾಲೂಕು: ಕುವೆಟ್ಟು ಮತ್ತು ಮಡಂತ್ಯಾರ್ ಗ್ರಾಮ ಪಂಚಾಯತಿಗಳು
ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಪಂಚಾಯತ್ ಕಚೇರಿಯಲ್ಲಿದ್ದ ಸಾರ್ವಜನಿಕರ ಅರ್ಜಿ ವಿಲೇವಾರಿ ರಿಜಿಸ್ಟರ್, ತೆರಿಗೆ ವಸೂಲಾತಿ ದಾಖಲೆಗಳು, ಕಟ್ಟಡ ನಿರ್ಮಾಣ ಪರವಾನಗಿ ಹಾಗೂ ೧೫ನೇ ಹಣಕಾಸು ಯೋಜನೆಗಳ ಅನುದಾನ ಬಳಕೆಯ ಕಡತಗಳನ್ನು ಕಣ್ಣಿಟ್ಟು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಸಿಂಹದ ಜೊತೆ ಸ್ಟಂಟ್‌ಗೆ ಹೋದ ಕನ್ನಡ ನಟ ಕಿರಣ್ ರಾಜ್: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ವೀಡಿಯೋ
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), ಕಾರ್ಯದರ್ಶಿಗಳು ಹಾಗೂ ಇತರೆ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ಕೊಠಡಿಯಲ್ಲಿ ಕೂರಿಸಿ ಸಾರ್ವಜನಿಕರ ದೂರುಗಳ ಕುರಿತು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಲೋಕಾಯುಕ್ತರ ಈ ಮಾಸ್ಟರ್‌ಸ್ಟ್ರೋಕ್ ದಾಳಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪಂಚಾಯತ್‌ಗಳಲ್ಲಿ ಲಂಚಕೋರ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದಲ್ಲಿ ತೀವ್ರ ನಡುಕ ಹಾಗೂ ಆತಂಕ ಸೃಷ್ಟಿಯಾಗಿದೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

