ಅಲಪ್ಪುಝ: ಕಾರಿಗೆ ಇಂಧನ ತುಂಬಿಸಿದ ತಕ್ಷಣ ಚಾಲಕ ಅಶ್ರದ್ಧೆಯಿಂದ ಕಾರನ್ನು ಮುನ್ನೆಡೆಸಿದ ಪರಿಣಾಮ, ಪೆಟ್ರೋಲ್ ಪಂಪ್‌ನ ಹೋಸ್ ಪೈಪ್ (Hose Pipe) ಸಿಲುಕಿ ಸಿಬ್ಬಂದಿಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ನಡುಕ ಹುಟ್ಟಿಸುವ ಘಟನೆ ಕೇರಳದ ಅಲಪ್ಪುಝ ಜಿಲ್ಲೆಯ ಕಳರ್‌ಕೋಡ್ ಪಕ್ಕಿ ಜಂಕ್ಷನ್ ಬಳಿಯ ಭಾರತ್ ಪೆಟ್ರೋಲಿಯಂ ಬಂಕ್‌ನಲ್ಲಿ ನಡೆದಿದೆ.
ಸೆಪ್ಟೆಂಬರ್ 6 ರಂದು ಮಧ್ಯಾಹ್ನ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಪೆಟ್ರೋಲ್ ಪಂಪ್ ನೌಕರ ರಾಮಚಂದ್ರನ್ ಎಂಬುವವರು ಕಾರಿಗೆ ಇಂಧನ ತುಂಬಿಸುತ್ತಿದ್ದರು. ಕಾರಿಗೆ ಇಂಧನ ತುಂಬುವುದು ಪೂರ್ಣಗೊಂಡ ತಕ್ಷಣ, ಡಿಸ್ಪೆನ್ಸರ್ ಹೋಸ್ (ಇಂಧನ ಪೈಪ್) ಅನ್ನು ವಾಹನದಿಂದ ಹೊರತೆಗೆಯುವ ಮೊದಲೇ ಚಾಲಕ ದಿಢೀರನೆ ಕಾರನ್ನು ಮುಂದೆ ಚಲಾಯಿಸಿದ್ದಾನೆ.
🚨 Disturbing Visuals
పెట్రోల్ నింపడం సరిగ్గా పూర్తి అయ్యిందో లేదో కూడా చూసుకోకుండా.. #Keralam pic.twitter.com/HpeUzlnqTl
— UttarandhraNow (@UttarandhraNow) September 8, 2026
ಇದರಿಂದಾಗಿ ಇಂಧನ ಪೈಪ್ ಕಟ್ ಆಗಿ, ಅದರ ಸೆಳೆತಕ್ಕೆ ಸಿಲುಕಿದ ರಾಮಚಂದ್ರನ್ ಅವರು ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಅವರ ಪಕ್ಕಟೆಲುಬಿಗೆ ತೀವ್ರ ಗಾಯಗಳಾಗಿವೆ. ಗಾಯಗೊಂಡ ರಾಮಚಂದ್ರನ್ ಅವರನ್ನು ತಕ್ಷಣವೇ ಸಹೋದ್ಯೋಗಿಗಳು ಅಲಪ್ಪುಝ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದು, ಪ್ರಸ್ತುತ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ: ಬಿಜೆಪಿ ವಿರುದ್ಧ ಸಿಎಂ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ
ಪ್ರಾಥಮಿಕ ತನಿಖೆಯ ಪ್ರಕಾರ, ಕಾರು ಚಾಲಕನ ಆತುರ ಹಾಗೂ ಪಂಪ್ ಉದ್ಯೋಗಿಯ ಅಶ್ರದ್ಧೆ ಈ ಘಟನೆಗೆ ಕಾರಣ ಎನ್ನಲಾಗಿದೆ. ಇಂಧನ ಪೈಪ್ ಸರಿಯಾಗಿ ಬಿಡುಗಡೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳದೆ ಚಾಲಕ ವಾಹನ ಮುನ್ನೆಡೆಸಿದ್ದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ತಡೆಯಲು ಭದ್ರತಾ ಮುನ್ನೆಚ್ಚರಿಕಾ ಕ್ರಮಗಳನ್ನು ಮರುಪರಿಶೀಲಿಸುತ್ತಿರುವುದಾಗಿ ಪೆಟ್ರೋಲ್ ಪಂಪ್ ಆಡಳಿತ ಮಂಡಳಿ ತಿಳಿಸಿದೆ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

