ನಾಗೌರ್: ಎಟಿಎಂ (ATM) ಯಂತ್ರವನ್ನು ಒಡೆದು ಕಳವು ಮಾಡಲು ಯತ್ನಿಸಿದ ಖದೀಮರನ್ನು ಪೊಲೀಸರು ಕೇವಲ 5 ನಿಮಿಷಗಳ ಮಿಂಚಿನ ಕಾರ್ಯಾಚರಣೆಯಲ್ಲಿ ಬಂಧಿಸಿರುವ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ. ಬ್ಯಾಂಕ್ನಲ್ಲಿದ್ದ ಆಧುನಿಕ ಭದ್ರತಾ ವ್ಯವಸ್ಥೆ ಹಾಗೂ ಪೊಲೀಸರ ತರಿತ ಸ್ಪಂದನೆಯಿಂದಾಗಿ ಕೋಟ್ಯಂತರ ರೂಪಾಯಿ ಕಳವಾಗುವುದು ತಪ್ಪಿದೆ.
ನಾಗೌರ್ ಜಿಲ್ಲೆಯ ಎಟಿಎಂ ಕೇಂದ್ರವೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು, ಎಟಿಎಂ ಯಂತ್ರವನ್ನು ಒಡೆದು ಸಂಪೂರ್ಣವಾಗಿ ಹೊತ್ತೊಯ್ಯಲು ಯತ್ನಿಸಿದ್ದಾರೆ. ಖದೀಮರು ಎಟಿಎಂ ಒಡೆಯಲು ಯತ್ನಿಸುತ್ತಿದ್ದಂತೆಯೇ ಬ್ಯಾಂಕ್ನ ಸೆಂಟ್ರಲ್ ಸೆಕ್ಯುರಿಟಿ ಸಿಸ್ಟಮ್ನಿಂದ ಬ್ಯಾಂಕ್ನ ಮುಖ್ಯ ಕಚೇರಿಗೆ ತಕ್ಷಣವೇ ‘ಅಲರ್ಟ್ ಮೆಸೇಜ್’ ರವಾನೆಯಾಗಿದೆ.
ఏటీఎంను ఎత్తుకెళ్లబోయి ఐదు నిమిషాల్లో పోలీసులకు చిక్కిన దొంగలు
రాజస్థాన్లోని నాగౌర్ జిల్లాలో ఏటీఎంను పెకిలించి ఎత్తుకెళ్లేందుకు దుండగులు ప్రయత్నించగా.. వెంటనే బ్యాంక్ హెడ్ ఆఫీస్కు అలర్ట్ వెళ్లింది.
అలర్ట్ అందుకున్న బ్యాంక్ సిబ్బంది పోలీసులకు సమాచారం ఇవ్వడంతో వేగంగా స్పందించిన… pic.twitter.com/PCueRuRjcT
— ముచ్చట్లు | Stories • Voices • Views (@muchatlu_) September 29, 2026
ಸಂದೇಶ ಸಿಗುತ್ತಿದ್ದಂತೆಯೇ ಜಾಗೃತರಾದ ಬ್ಯಾಂಕ್ ಸಿಬ್ಬಂದಿ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಲಭ್ಯವಾದ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ, ಕೇವಲ 5 ನಿಮಿಷಗಳ ಅಂತರದಲ್ಲಿ ಎಟಿಎಂ ಕೇಂದ್ರವನ್ನು ಸುತ್ತುವರೆದು ಕಳ್ಳರನ್ನು ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಇವಳು ಯಾರು ಗೊತ್ತಾಯ್ತಾ? ಇವಳು ನನ್ನ ಹೆಂಡತಿ; ಮಾಫಿ ಸಾಕ್ಷಿ ಪ್ರದೋಶ್ ಬಿಚ್ಚಿಟ್ಟ ಸತ್ಯ
ಬ್ಯಾಂಕ್ನ ಅತ್ಯಾಧುನಿಕ ಅಲರ್ಟ್ ಸಿಸ್ಟಮ್ ಹಾಗೂ ಪೊಲೀಸರ ಸಮಯಪ್ರಜ್ಞೆಯಿಂದಾಗಿ ಕಳ್ಳತನದ ಯತ್ನ ಸಂಪೂರ್ಣವಾಗಿ ವಿಫಲವಾಗಿದೆ. ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ಹಿಂದೆ ನಡೆದಿರುವ ಇಂತಹುದೇ ಎಟಿಎಂ ಕಳ್ಳತನ ಪ್ರಕರಣಗಳಲ್ಲಿ ಇವರ ಪಾತ್ರವಿದೆಯೇ ಎಂಬ ಕೋನದಲ್ಲಿ ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

