2027ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 & 2ರ ಅಂತಿಮ ವೇಳಾಪಟ್ಟಿ ಪ್ರಕಟ: ಮಾರ್ಚ್ 22ರಿಂದ ಪರೀಕ್ಷೆ-1, ಮೇ 24ರಿಂದ ಪರೀಕ್ಷೆ-2

ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಅತ್ಯಂತ ಮಹತ್ವದ ಮಾಹಿತಿ ಬಿಡುಗಡೆ ಮಾಡಿದೆ. 2027ನೇ ಸಾಲಿನ ಎಸ್‌ಎಸ್‌ಎಲ್‌ಸಿ ‘ಪರೀಕ್ಷೆ-1’ (Exam-1) ಹಾಗೂ ‘ಪರೀಕ್ಷೆ-2’ರ (Exam-2) ಅಧಿಕೃತ ಅಂತಿಮ ವೇಳಾಪಟ್ಟಿಯನ್ನು (Final Time Table) ಮಂಡಳಿಯು ಪ್ರಕಟಿಸಿದೆ. ಪ್ರಕಟಿತ ದಿನಾಂಕಗಳ ಪ್ರಕಾರ, ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮಾರ್ಚ್ 22 ರಿಂದ ಏಪ್ರಿಲ್ 5ರವರೆಗೆ ಜರುಗಲಿದ್ದು, ಪರೀಕ್ಷೆ-2 ಮೇ 24 ರಿಂದ ಮೇ 31ರವರೆಗೆ ನಡೆಯಲಿದೆ.

1. ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ವೇಳಾಪಟ್ಟಿ (ಮಾರ್ಚ್/ಏಪ್ರಿಲ್ 2027):

ದಿನಾಂಕ & ದಿನವಿಷಯಗಳು
22.03.2027 (ಸೋಮವಾರ)ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಇತ್ಯಾದಿ)
25.03.2027 (ಗುರುವಾರ)ವಿಜ್ಞಾನ / ರಾಜ್ಯಶಾಸ್ತ್ರ / ಸಂಗೀತ
27.03.2027 (ಶನಿವಾರ)ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
30.03.2027 (ಮಂಗಳವಾರ)ಗಣಿತ / ಸಮಾಜಶಾಸ್ತ್ರ
02.04.2027 (ಶುಕ್ರವಾರ)ತೃತೀಯ ಭಾಷೆ / ಎನ್.ಎಸ್.ಕ್ಯು.ಎಫ್. (NSQF) ವಿಷಯಗಳು
03.04.2027 (ಶನಿವಾರ)ಜೆ.ಟಿ.ಎಸ್. (JTS) ವಿಷಯಗಳು / ಅರ್ಥಶಾಸ್ತ್ರ
05.04.2027 (ಸೋಮವಾರ)ಸಮಾಜ ವಿಜ್ಞಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ವೇಳಾಪಟ್ಟಿ (ಮೇ 2027):

ದಿನಾಂಕ & ದಿನವಿಷಯಗಳು
24.05.2027 (ಸೋಮವಾರ)ಪ್ರಥಮ ಭಾಷೆ
28.05.2027 (ಶುಕ್ರವಾರ)ತೃತೀಯ ಭಾಷೆ / ಎನ್.ಎಸ್.ಕ್ಯು.ಎಫ್. (NSQF) ವಿಷಯಗಳು
29.05.2027 (ಶನಿವಾರ)ಸಮಾಜ ವಿಜ್ಞಾನ
31.05.2027 (ಸೋಮವಾರ)ಜೆ.ಟಿ.ಎಸ್. (JTS) ವಿಷಯಗಳು / ಅರ್ಥಶಾಸ್ತ್ರ

ಪರೀಕ್ಷಾ ಸಮಯ & ಪ್ರಮುಖ ಸೂಚನೆಗಳು:

  • ಪ್ರಥಮ ಭಾಷೆ & ಕೋರ್ ವಿಷಯಗಳು: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:15 ರವರೆಗೆ (ಪ್ರಶ್ನೆಪತ್ರಿಕೆ ಓದಲು 15 ನಿಮಿಷ ಸೇರಿ ಒಟ್ಟು 3 ಗಂಟೆ 15 ನಿಮಿಷ).

  • ದ್ವಿತೀಯ & ತೃತೀಯ ಭಾಷೆಗಳು: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ (3 ಗಂಟೆಗಳು).

  • NSQF ವಿಷಯಗಳು: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 12:15 ರವರೆಗೆ.

  • ಸಂಗೀತ ವಿಷಯಗಳು: ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ಪರೀಕ್ಷೆಯು ಮಧ್ಯಾಹ್ನ 2:00 ರಿಂದ ಸಂಜೆ 5:15 ರವರೆಗೆ ನಿಗದಿಯಾಗಿದೆ.

  • ವಿಶೇಷ ಚೇತನ ವಿದ್ಯಾರ್ಥಿಗಳು (CWSN): ನಿಯಮಾನುಸಾರ ಹೆಚ್ಚುವರಿ ಕಾಲಾವಕಾಶವನ್ನು ಮಂಡಳಿಯು ಒದಗಿಸಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ