ಪಡುಮಲೆ: ಗ್ಯಾಸ್‌ ಬಲೂನ್‌ ವಿದ್ಯುತ್‌ ತಂತಿಗೆ ತಗುಲಿ ಹೊತ್ತಿ ಉರಿದ ಕಾರು

Gas balloon hits power line, car catches fire in Padumale

ಪುತ್ತೂರು: ವಿದ್ಯುತ್‌ ತಂತಿಗೆ ಗ್ಯಾಸ್‌ ಬಲೂನ್‌ ತಗುಲಿದ ಪರಿಣಾಮ ಕಿಡಿ ಹತ್ತಿ ಕಾರು ಬೆಂಕಿಗಾಹುತಿಯಾದ ಘಟನೆ ಮೈಂದಿನಡ್ಕದ ಪಡುಮಲೆ ಶ್ರೀ ಪೂಮಾಣಿ -ಕಿನ್ನಿಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದ ಸಮೀಪ ಇಂದು (ಜ.18) ಮಧ್ಯಾಹ್ನ ನಡೆದಿದೆ.

ಸದ್ಯ ದೈವಸ್ಥಾನದ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಅದರಂತೆ ವಠಾರದಲ್ಲಿನ ವಿದ್ಯುತ್‌ ಕಂಬದ ಬಳಿ ಕಾರು ಪಾರ್ಕಿಂಗ್‌ ಮಾಡಲಾಗಿತ್ತು. ಈ ವೇಳೆ ಸಂತೆಯಲ್ಲಿದ್ದ ಬಲೂನ್‌ ಗಾಳಿಗೆ ಹಾರಿ ವಿದ್ಯುತ್‌ ತಂತಿಗೆ ತಗುಲಿದೆ.

Advertisement

ಇದನ್ನೂ ಓದಿ: ನಿಗೂಢವಾಗಿ ಸಾವನ್ನಪ್ಪಿದ ಸುಮಂತ್ ಕೇಸ್‌ಗೆ ಟ್ವಿಸ್ಟ್: ಕೆರೆಯಲ್ಲಿ ಮಾರಕಾಸ್ತ್ರ ಪತ್ತೆ

ಬೂಲೂನ್‌ ವಿದ್ಯುತ್‌ ತಂತಿಗೆ ತಗುಲುತ್ತಿದ್ದಂತೆ ಶಾರ್ಟ್‌ ಸರ್ಕ್ಯೂಟ್‌ ಊಂಟಾಗಿ ಬೆಂಕಿಯ ಕಿಡಿ ಅಲ್ಲೇ ಇದ್ದ ಕಾರಿಗೆ ತಗುಲಿದೆ. ಕ್ಷಣಾರ್ಧದಲ್ಲೇ ಕಾರು ಧಗಧಗಿಸಿದೆ. ಅಲ್ಲದೆ, ಬೆಂಕಿಯ ನಡುವೆ ಕಾರು ಆಕಸ್ಮಿಕವಾಗಿ ಮುಂದಕ್ಕೆ ಚಲಿಸಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ.  ವೇಳೆ ಹೊತ್ತಿಕೊಂಡ ಕಿಡಿ ಕಾರಿಗೆ ತಗುಲಿದೆ. ಪರಿಣಾಮ ಕಾರು ಹೊತ್ತಿ ಉರಿದಿದೆ.

Advertisement

ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಕಾರು ಭಾಗಶಃ ಸುಟ್ಟು ಕರಕಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು