ಕೇವಲ 134 ರನ್‌ಗಳ ಗುರಿ ಬೆನ್ನಟ್ಟಿ ಸೋಲಿನ ದವಡೆಯಲ್ಲಿದ್ದ ಟೀಂ ಇಂಡಿಯಾವನ್ನು ಪಾರು ಮಾಡಿದ ಮಳೆ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡವು ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನಲ್ಲಿ ನಡೆದ ಐದು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದೆ. ಕಡಿಮೆ ಮೊತ್ತದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭಿಕ ಬ್ಯಾಟಿಂಗ್ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದರೂ, ಮಳೆಯಾಶ್ರಿತ ಪಂದ್ಯದಲ್ಲಿ ಡಕ್ವರ್ತ್-ಲೂಯಿಸ್ (DLS) ನಿಯಮದನ್ವಯ 4 ರನ್‌ಗಳಿಂದ ಪಾರಾಗಿ ಸರಣಿಯಲ್ಲಿ ರೋಚಕ ಗೆಲುವು ದಾಖಲಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತದ ಯುವ ವೇಗಿಗಳ ಸಂಘಟಿತ ದಾಳಿಗೆ ಕಿವೀಸ್ ಪಡೆ ಸಂಪೂರ್ಣ ತತ್ತರಿಸಿತು: ಆರಂಭಿಕರಾದ ವಿಲ್ ಯಂಗ್ (6), ಟಿಮ್ ಸೈಫರ್ಟ್ (0) ಹಾಗೂ ಹೆನ್ರಿ ನಿಕೋಲ್ಸ್ (11) ಬೇಗನೆ ನಿರ್ಗಮಿಸಿದರು. ಮಧ್ಯಮ ಕ್ರಮಾಂಕದಲ್ಲಿ ಡ್ಯಾರಿಲ್ ಮಿಚೆಲ್ 104 ಎಸೆತಗಳಲ್ಲಿ 1 ಬೌಂಡರಿ ಸಹಿತ 54 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಿಚೆಲ್ ಸ್ಯಾಂಟ್ನರ್ (31) ಹೊರತುಪಡಿಸಿ ಇನ್ನುಳಿದಯಾವ ಆಟಗಾರರೂ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ನ್ಯೂಜಿಲೆಂಡ್ 41 ಓವರ್‌ಗಳಲ್ಲಿ ಕೇವಲ 134 ರನ್‌ಗಳಿಗೆ ಆಲೌಟ್ ಆಯಿತು.

Advertisement

ಭಾರತದ ಯುವ ವೇಗದ ಬೌಲರ್ ಗುರ್‌ನೂರ್ ಬ್ರಾರ್ ಅತ್ಯುತ್ತಮ ಪ್ರದರ್ಶನ ನೀಡಿ, 10 ಓವರ್‌ಗಳಲ್ಲಿ ಕೇವಲ 30 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದರು. ಅವರಿಗೆ ಸಾಥ್ ನೀಡಿದ ಆಕಿಬ್ ನಬಿ (2/31), ಅಂಶುಲ್ ಕಾಂಬೋಜ್ (2/25) ಹಾಗೂ ಅಕ್ಷರ್ ಪಟೇಲ್ (2 ವಿಕೆಟ್) ಕಿವೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. 134 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತಕ್ಕೆ ಕಿವೀಸ್ ಬೌಲರ್‌ಗಳು ಆರಂಭದಲ್ಲೇ ಮಾರಕ ಪೆಟ್ಟು ನೀಡಿದರು.

ಇದನ್ನೂ ಓದಿ: ಕೊನೆಯ ಎಸೆತ ಎಸೆದಿದ್ದೇನೆ: ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ನಿವೃತ್ತಿ ಘೋಷಣೆ,

Advertisement

ನಾಯಕ ಶುಭ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಎರಡನೇ ಓವರ್‌ನಲ್ಲೇ ಜಾಕಬ್ ಡಫಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ರೋಹಿತ್ ಶರ್ಮಾ ಕೆಲ ಆಕರ್ಷಕ ಹೊಡೆತಗಳನ್ನಾಡಿದರೂ ಕೈಲ್ ಜೇಮಿಸನ್ ಬೌಲಿಂಗ್‌ಗೆ ಔಟಾದರು. ಅಕ್ಷರ್ ಪಟೇಲ್ ಕೂಡ ಬೇಗನೆ ನಿರ್ಗಮಿಸಿದರು.  ಭಾರತವು ಕೇವಲ 47 ರನ್‌ಗಳಿಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಸ್ವಲ್ಪ ಚೇತರಿಕೆ ನೀಡುವ ಯತ್ನ ಮಾಡಿದರು. ಆದರೆ ಅಯ್ಯರ್ ಕೂಡ ಶಾರ್ಟ್‌ ಪಿಚ್ ಎಸೆತಕ್ಕೆ ಬಲಿಯಾದರು. ನೋಡನೋಡುತ್ತಿದ್ದಂತೆ ಟೀಂ ಇಂಡಿಯಾ 111 ರನ್‌ಗಳಿಗೆ 7 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ದವಡೆಯಲಿತ್ತು. ಈ ಹಂತದಲ್ಲಿ ವರುಣ ದೇವ ಕೃಪೆ ತೋರಿದ್ದು, ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಅಂತಿಮವಾಗಿ DLS ನಿಯಮದನ್ವಯ ಭಾರತ 4 ರನ್‌ಗಳ ರೋಚಕ ಜಯದ ನಗೆ ಬೀರಿತು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement