Breaking News

Special: ಮುಖೇಶ್ ಅಂಬಾನಿ ಮನೆ ಕರೆಂಟ್ ಬಿಲ್ ಎಷ್ಟು ಗೊತ್ತ?

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ನೆಲೆಸಿರುವ ಐಷಾರಾಮಿ ಆ್ಯಂಟೀಲಿಯಾ ಬಂಗಲೆಯ ಮಾಸಿಕ ವಿದ್ಯುತ್ ಬಿಲ್ 70 ಲಕ್ಷ ರೂಪಾಯಿಗಳಂತೆ.

ಮಾಸಿಕ 6 ಲಕ್ಷ ಯುನಿಟ್‌ಗಳಷ್ಟು ವಿದ್ಯುತ್‌

Advertisement

ಮನೆ 27 ಅಂತಸ್ತು ಹೊಂದಿದ್ದರೂ, ಅದು ಹೊಂದಿರುವ ಎತ್ತರ ಅಂದಾಜು 60 ಮಹಡಿ ಕಟ್ಟಡದಷ್ಟಿದೆ. ಈ ಕಟ್ಟಡದಲ್ಲಿ ಮಾಸಿಕ 6 ಲಕ್ಷ ಯುನಿಟ್‌ಗಳಷ್ಟು ವಿದ್ಯುತ್ ಬಳಕೆ ಆಗುತ್ತಿದ್ದು, ಎಲ್ಲಾ ರಿಯಾಯಿತಿ ಕಳೆದ ಬಳಿಕ 70-80 ಲಕ್ಷ ರೂ. ಶುಲ್ಕ ವಿಧಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಜಿಮ್, ಸ್ಪಾ, ಚಿತ್ರಮಂದಿರ, ಈಜುಕೊಳ, ದೇವಸ್ಥಾನ,

ಈ ಕಟ್ಟಡದಲ್ಲಿ ಜಿಮ್, ಸ್ಪಾ, ಚಿತ್ರಮಂದಿರ, ಈಜುಕೊಳ, ದೇವಸ್ಥಾನ, 150ಕ್ಕೂ ಹೆಚ್ಚು ಕಾರು ನಿಲುಗಡೆ ತಾಣ, ಮೇಲ್ಮಹಡಿ ಉದ್ಯಾನಗಳು, 3 ಹೆಲಿಪ್ಯಾಡ್‌ಗಳು ಇವೆ. ನಿರ್ಮಾಣದ ವೇಳೆ ಇದರ ಅಂದಾಜು ವೆಚ್ಚ 4500 ಕೋಟಿ ರೂ.ನಷ್ಟಿದ್ದು, ಪ್ರಸ್ತುತ ಇದರ ಮೌಲ್ಯ 15000 ಕೋಟಿ ರೂ.ಗಿಂತ ಹೆಚ್ಚಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು