Breaking News

BJP : ಬಿಜೆಪಿಯ ಅತಿಕಿರಿಯ ಅಧ್ಯಕ್ಷನಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕಾರ

BJP: Nitin Nabin takes charge as the acting president of BJP

ನವದೆಹಲಿ‌ : ಸೋಮವಾರ ನಡೆದ ನಾಮಪತ್ರ ಸಲ್ಲಿಕೆ ಮತ್ತು ಪರಿಶೀಲನೆ ಪ್ರಕ್ರಿಯೆ ಬಳಿಕ ನಿತಿನ್ ನಬಿನ್ ಅವರೊಬ್ಬರೇ ಅಭ್ಯರ್ಥಿಯಾಗಿ ಉಳಿದಿದ್ದರು. ಹಿಂಪಡೆಯುವ ಅವಧಿಯೂ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅವರು ವಿರೋಧವಿಲ್ಲದೆ ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಪಕ್ಷದ ರಾಷ್ಟ್ರೀಯ ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ತಡರಾತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ನಿತಿನ್ ನಬಿನ್ ಮಂಗಳವಾರ ಪಕ್ಷದ ಹೊಸ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದರೊಂದಿಗೆ ಅವರು ಬಿಜೆಪಿಯ ಇತಿಹಾಸದಲ್ಲೇ ಅತಿಕಿರಿಯ ವಯಸ್ಸಿನ ಅಧ್ಯಕ್ಷರಾಗಿದ್ದಾರೆ.

Advertisement

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖ್ಯಮಂತ್ರಿಗಳು, ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯ ಘಟಕಗಳ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ಅಧಿಕಾರ ಸ್ವೀಕಾರದ ನಂತರ ಮಾತನಾಡಿದ ನಿತಿನ್ ನಬಿನ್, ಇದು ಕೇವಲ ಒಂದು ಹುದ್ದೆಯನ್ನು ಸ್ವೀಕರಿಸುವ ಕ್ಷಣವಲ್ಲ. ಇದು ಈ ಪಕ್ಷದ ತತ್ವ, ಪರಂಪರೆ ಹಾಗೂ ರಾಷ್ಟ್ರೀಯ ಚಳವಳಿಯ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವ ಕ್ಷಣ. ಅಭಿವೃದ್ಧಿಶೀಲ ಭಾರತದ ಕನಸಿಗೆ ಇಂದು 140 ಕೋಟಿ ಭಾರತೀಯರು ಸಂಪರ್ಕ ಹೊಂದಿದ್ದಾರೆ,‌ಎಂದು ಹೇಳಿದರು. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಕೃತಜ್ಞತೆ ಸಲ್ಲಿಸಿದರು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಕ್ಷದ ವಿಚಾರ ಬಂದಾಗ ನಿತಿನ್ ನಬಿನ್ ನನ್ನ ಬಾಸ್. ನಾನು ಕೂಡ ಪಕ್ಷದ ಸಾಮಾನ್ಯ ಕಾರ್ಯಕರ್ತನೇ ಎಂದು ಹೇಳಿದರು. ನಬಿನ್ ಅವರ ವಯಸ್ಸನ್ನು ಉಲ್ಲೇಖಿಸಿದ ಅವರು, “ಇಂದಿನ ಯುವಜನರ ಭಾಷೆಯಲ್ಲಿ ಹೇಳಬೇಕೆಂದರೆ, ನಿತಿನ್ ಜೀ ಸ್ವತಃ ಒಬ್ಬ ಮಿಲೇನಿಯಲ್. ಮುಂದಿನ 25 ವರ್ಷಗಳು ಅಭಿವೃದ್ಧಿಶೀಲ ಭಾರತದ ನಿರ್ಮಾಣಕ್ಕೆ ಅತ್ಯಂತ ಮಹತ್ವದ ಅವಧಿ. ಈ ಸಮಯದಲ್ಲಿ ಅವರು ಬಿಜೆಪಿಯ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲಿದ್ದಾರೆ,” ಎಂದರು.

ಇದನ್ನೂ ಓದಿ : UAE : ಬೃಹತ್ ವ್ಯಾಪಾರದ ಗುರಿಯೊಂದಿಗೆ ಭಾರತಕ್ಕೆ ಯುಎಇ ಅಧ್ಯಕ್ಷ ಭೇಟಿ, ಪ್ರಮುಖ ಒಪ್ಪಂದ ಅಂತಿಮ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು