ನಡುರಸ್ತೆಯಲ್ಲೇ ಬಹಿರಂಗವಾಗಿ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ: ಎಸಿಬಿ ಬಲೆಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಭ್ರಷ್ಟ

ಕಚೇರಿಯಿಂದ ಹೊರಬಂದು ನಡುರಸ್ತೆಯಲ್ಲೇ ಸಾರ್ವಜನಿಕವಾಗಿ ಬಹಿರಂಗವಾಗಿ ಲಂಚದ ಹಣ ಪಡೆಯುತ್ತಿದ್ದ ಸರ್ಕಾರಿ ಅಧಿಕಾರಿಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ (ACB) ಅಧಿಕಾರಿಗಳ ರೆಡ್‌ಹ್ಯಾಂಡ್‌ (Red-Handed) ಕಾರ್ಯಾಚರಣೆಗೆ ಬಲಿಯಾಗಿದ್ದಾರೆ ತಮ್ಮ ಕಚೇರಿ ಆವರಣದ ಬಳಿ ಬಂದು ಅರ್ಜಿದಾರರಿಂದ ಲಂಚದ ಹಣವನ್ನು ಎಣಿಸಿ ಜೇಬಿಗಿಳಿಸಿಕೊಳ್ಳುತ್ತಿದ್ದ ವೇಳೆಯಲ್ಲೇ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಅಧಿಕಾರಿಯನ್ನು ಹಣ ಸಮೇತ ವಶಕ್ಕೆ ಪಡೆದಿದ್ದಾರೆ.  ಇನ್ನು ಇಲ್ಲಿ ವೈರಲ್​​ ಆಗಿರುವ ವಿಡಿಯೋ ನಿಖರವಾಗಿ ಎಲ್ಲಿಯದ್ದು ಎಂಬುದು ತಿಳಿದು ಬಂದಿಲ್ಲ, ಎಕ್ಸ್​​​ನಲ್ಲಿ ಈ  ಬಗ್ಗೆ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದೆ. 

ಕೆಲಸ ಮಾಡಿಕೊಡಲು ಹಣಕ್ಕೆ ಬೇಡಿಕೆಯಿಟ್ಟಿದ್ದ ಈ ಅಧಿಕಾರಿ, ಕಚೇರಿಯ ಒಳಗಡೆ ಕ್ಯಾಮೆರಾ ಅಥವಾ ಜನರಿರುತ್ತಾರೆಂಬ ಭಯದಿಂದ ಅರ್ಜಿದಾರರನ್ನು ಹೊರಗಡೆ ಕರೆಸಿಕೊಂಡಿದ್ದರು. ಅಧಿಕಾರಿಯ ಕೃತ್ಯದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಪಡೆದಿದ್ದ ಎಸಿಬಿ ತಂಡ, ಪ್ಲಾನ್ ರೂಪಿಸಿ ರಸ್ತೆಯ ಸುತ್ತಮುತ್ತ ಸಿವಿಲ್ ಉಡುಪಿನಲ್ಲಿ ಕಾದು ಕುಳಿತಿತ್ತು.

ಇದನ್ನೂ ಓದಿ: ಕಾಂಗ್ರೆಸ್‌ ದುರಾಡಳಿತದಿಂದ ಪಂಚಾಯತ್ ವ್ಯವಸ್ಥೆ ದಿವಾಳಿ, ಭ್ರಷ್ಟಾಚಾರ ಮುಗಿಲಿಗೆ: ಗುರುಪುರದಲ್ಲಿ ಶಾಸಕ ಡಾ. ವೈ. ಭರತ್ ಶೆಟ್ಟಿ, MLC ಕಿಶೋರ್ ಕುಮಾರ್ ತೀವ್ರ ವಾಗ್ದಾಳಿ

ಇಲ್ಲಿದೆ ನೋಡಿ ವಿಡಿಯೋ:

ಅಧಿಕಾರಿ ಕಚೇರಿಯಿಂದ ರಸ್ತೆಗೆ ಬಂದು ಹಣ ಸ್ವೀಕರಿಸುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಮುತ್ತಿಗೆ ಹಾಕಿದ ಎಸಿಬಿ ಅಧಿಕಾರಿಗಳು, ಅವರ ಬಳಿಯಿದ್ದ ಲಂಚದ ಹಣವನ್ನು ಜಪ್ತಿ ಮಾಡಿ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ (PC Act) ಪ್ರಕರಣ ದಾಖಲಾಗಿದ್ದು, ಅಧಿಕಾರಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ