Breaking News

ಗದಗ: ಲಕ್ಕುಂಡಿ ಮನೆಯಲ್ಲಿ ಪತ್ತೆಯಾಯ್ತು 10ನೇ ಶತಮಾನದ ದೇಗುಲ

ಗದಗ: ಐತಿಹಾಸಿಕ ತಾಣ ಲಕ್ಕುಂಡಿ ಅಕ್ಷರಶಃ ಅಚ್ಚರಿಗಳ ತವರು. ಇಲ್ಲಿನ ಮಣ್ಣಿನ ಕಣಕಣದಲ್ಲೂ ಇತಿಹಾಸ ಅಡಗಿದೆ ಎನ್ನುವುದಕ್ಕೆ ಇದೀಗ ಮತ್ತೊಂದು ಜೀವಂತ ಸಾಕ್ಷಿ ಲಭ್ಯವಾಗಿದೆ. ಗ್ರಾಮದ ಕುಂಬಾರ ಓಣಿಯಲ್ಲಿರುವ ಮನೆಯೊಂದರ ಹಾಲ್ ಪಕ್ಕದಲ್ಲೇ 10ನೇ ಶತಮಾನದ ಪುರಾತನ ಈಶ್ವರನ ಗರ್ಭಗುಡಿ ಪತ್ತೆಯಾಗಿದ್ದು, ಇಡೀ ನಾಡಿನ ಗಮನ ಸೆಳೆಯುತ್ತಿದೆ.

ಲಕ್ಕುಂಡಿಯ ಕುಂಬಾರ ಓಣಿಯಲ್ಲಿರುವ ಚೌಕಿಮಠ ಎಂಬುವವರ ಮನೆ ಹೊರನೋಟಕ್ಕೆ ಸಾಮಾನ್ಯ ಮನೆಯಂತೆ ಕಂಡರೂ, ಅದರ ಒಳಾಂಗಣ ಮಾತ್ರ ಅದ್ಭುತ ಇತಿಹಾಸವನ್ನು ತನ್ನೊಳಗೆ ಅಡಗಿಸಿಕೊಂಡಿದೆ.

Advertisement

ಇದನ್ನೂ ಓದ: Life : ಗೊತ್ತಿಲ್ಲದಂತೆ ನಿಮ್ಮ ಮಾನಸಿಕ ಆರೋಗ್ಯ ಹಾನಿಗೊಳಿಸುವ ವಿಷಕಾರಿ ವಾತಾವರಣ, ಎಚ್ಚರ !

ಮನೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆಯೇ ಅಲ್ಲಿ ಸುಂದರವಾದ ಮಂಟಪ ಹಾಗೂ ಮಹಾಂತೇಶ್ವರ ದೇವರ ಮೂರ್ತಿ ಕಣ್ಮನ ಸೆಳೆಯುತ್ತದೆ. ಇನ್ನೂ ಅಚ್ಚರಿಯ ವಿಷಯವೆಂದರೆ, ಕುಟುಂಬದ ಸದಸ್ಯರು ಓಡಾಡುವ ಮನೆಯ ಹಾಲ್‌ನ ಪಕ್ಕದಲ್ಲೇ ಪುರಾತನ ಈಶ್ವರನ ಗರ್ಭಗುಡಿಯಿದೆ!

ಚೌಕಿಮಠ ಕುಟುಂಬದವರು ಕಳೆದ ನಾಲ್ಕು ತಲೆಮಾರುಗಳಿಂದ ಇದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸುಮಾರು 10ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ಐತಿಹಾಸಿಕ ದೇವಸ್ಥಾನದ ಆವರಣವನ್ನೇ ಅವರು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾರೆ.

ಪುರಾತನ ಕೆತ್ತನೆಗಳುಳ್ಳ ಸ್ತಂಭಗಳು, ಕಲ್ಲಿನ ಗೋಡೆಗಳ ನಡುವೆಯೇ ಈ ಕುಟುಂಬದ ದಿನಚರಿ ಸಾಗುತ್ತದೆ. ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ಈ ಪರಂಪರೆಯನ್ನು ಅವರು ಕಾಪಾಡಿಕೊಂಡು ಬಂದಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು