Breaking News

ಸ್ವಸ್ತಿಕ್‌ ಪ್ರೀಮಿರ್‌ ಲೀಗ್-1‌ ಕ್ರಿಕೆಟ್‌ ಟೂರ್ನಮೆಂಟ್:‌ ನವೀನ್‌ ಶೆಟ್ಟಿ ತಂಡ ಚಾಂಪಿಯನ್

ಪುತ್ತೂರು: ಮರಿಲ್‌ ಬಳಿ ಇರುವ ಸಾರ್ವಜನಿಕ ಕ್ರೀಡಾಂಗಣದಲ್ಲಿ ಜ.20 ರಂದು ನಡೆದ ನಮ್ಮ ಶಿಫ್ಟ್‌ ಅರ್ಪಿಸುವ ಸ್ವಸ್ತಿಕ್‌ ಪ್ರೀಮಿಯರ್‌ ಲೀಗ್‌ ಸೀಸನ್‌-1 ಕ್ರಿಕೆಟ್‌ ಟೂರ್ನಮೆಂಟ್ನಲ್ಲಿ ನವೀನ್‌ ಶೆಟ್ಟಿ ನಾಯಕತ್ವದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಕ್ಯಾಂಪ್ಕೋ ಸಂಸ್ಥೆಯ ಸೂಪರ್ವೈಸರ್, ಆಪರೇಟರ್, ಹೆಲ್ಪರ್, ಕಾಂಟ್ರಾಕ್ಟ್ ಬಾಯ್ಸ್ ಸೇರಿದಂತೆ ಒಟ್ಟು 56 ಸಿಬ್ಬಂದಿಗಳನ್ನೊಳಗೊಂಡ 4 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದವು.

Advertisement


ಮಧ್ಯಾಹ್ನ 2.30ಕ್ಕೆ ಆರಂಭವಾದ ಕ್ರಿಕೆಟ್‌ ಪಂದ್ಯಾವಳಿ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು. 6 ಲೀಗ್‌ ಮ್ಯಾಚ್‌ಗಳು, ಎರಡು ಸೂಪರ್‌ ಓವರ್‌ ಮ್ಯಾಚ್ ಸೇರಿದಂತೆ ಒಟ್ಟು 9 ಪಂದ್ಯಗಳು ನಡೆದವು. ವಿನಯ್‌ ಕುಮಾರ್‌ ನಾಯಕತ್ವದ ತಂಡ ಲೀಗ್‌ ಪಂದ್ಯದಲ್ಲೇ ಹೊರನಡೆಯಿತು.

ಇದನ್ನೂ ಓದಿ: Shocking: ಥೈಲ್ಯಾಂಡಿನಲ್ಲಿ ಭಾರತೀಯ ಪ್ರವಾಸಿ ಸಾವು

ಸೆಮಿಫೈನಲ್‌ಗೆ ಪ್ರವೇಶಿಸಿದ ಮೂರು ತಂಡಗಳ ಪೈಕಿ ನವೀನ್‌ ತಂಡ ನೇರವಾಗಿ ಫೈನಲ್ ಪ್ರವೇಶಿಸಿತು. ಚೀಟಿ ಎತ್ತುವ ಮೂಲಕ ಫೈನಲ್‌ ಪ್ರವೇಶಿಸುವ ಅದೃಷ್ಟ ಪಡೆಯಿತು. ರೂಪೇಶ್-ಭವಿತ್‌ ತಂಡಗಳ ನಡುವೆ 2 ಓವರ್‌ಗಳ ಸೂಪರ್ ಓವರ್‌ ಪಂದ್ಯ ಆಡಿಸಲಾಗಿ ಪಂದ್ಯವು ಸಮಬಲ ಸಾಧಿಸಿತು. ಮತ್ತೆ 1 ಓವರ್‌ಗಳ ಸೂಪರ್‌ಓವರ್‌ ಪಂದ್ಯ ನಡೆದು ಭವಿತ್‌ ತಂಡ ಫೈನಲ್‌ ಪ್ರವೇಶಿತು.

3 ಓವರ್‌ಗಳ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ನವೀನ್‌ ತಂಡ 3 ವಿಕೆಟ್‌ ನಷ್ಟಕ್ಕೆ 45 ರನ್‌ಗಳನ್ನು ಬಾರಿಸಿತು. 46 ರನ್‌ಗಳ ಗೆಲುವಿನಗುರಿ ಬೆನ್ನಟ್ಟಿದ ಭವಿತ್‌ ತಂಡ, 6 ವಿಕೆಟ್‌ ಕಳೆದುಕೊಂಡು 38 ರನ್‌ ಗಳಿಸಲಷ್ಟೇ ಶಕ್ತವಾಯಿತು.
ಬೆಸ್ಟ್‌ ಬ್ಯಾಟ್ಸ್‌ಮೆನ್‌ ಪ್ರಶಸ್ತಿಯನ್ನು ನವೀನ್‌ ಪಡೆದುಕೊಂಡರೆ, ಸೀರಿಸ್ ಪ್ರಶಸ್ತಿಯನ್ನು ಭವಿತ್‌, ಬೆಸ್ಟ್‌ ಬೌಲರ್‌ ಪ್ರಶಸ್ತಿಯನ್ನು ಗೌತಮ್ ಪಡೆದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು