Breaking News

WPL: ಆರ್ಸಿಬಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್

ವಡೋದರ: ಹಾಲಿ ಚಾಂಪಿಯನ್ಸ್ ಆರ್‌ಸಿಬಿ ತಂಡದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಡೆಲ್ಲಿ ವಿರುದ್ದ ನಡೆದ ಪಂದ್ಯಾಟದಲ್ಲಿ ಆರ್‌ಸಿಬಿ ತಂಡಕ್ಕೆ 7 ವಿಕೆಟ್‌ಗಳ ಅಂತರದಿಂದ ಸೋಲಾಗಿದೆ.

ವಡೋದರದ ಬಿಸಿಎ ಸ್ಟೇಡಿಯಂ ನಲ್ಲಿ ನಡೆದ ಪಂದ್ಯಾಟದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕಿ ಜೆಮಿಮಾ ರೋಡ್ರಿಗಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

Advertisement

ಇದನ್ನೂ ಓದಿ: Breaking: ತಂದೆಗೆ ಚೂರಿ ಹಾಕಿ, ತಾನು ಗುಂಡು ಹಾರಿಸಿಕೊಂಡ ಯುವಕ

ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡ ನಾಯಕಿ ಸ್ಮೃತಿ ಮಂದಾನ ಅವರ ಏಕಾಂಗಿ ಹೋರಾಟ ಹೊರತಾಗಿ ಉಳಿದ ಬ್ಯಾಟರ್‌ಗಳು ಸತತ ವಿಕೆಟ್ ಒಪ್ಪಿಸಿ ರನ್ ಗಳಿಸಲು ಪರದಾಡಿದರು.

ಅಂತಿಮವಾಗಿ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 109 ರನ್ ಗಳಿಸಲಷ್ಟೇ ಶಕ್ತವಾಯ್ತು. ಎಂದಿನಂತೆ ಬಿರುಸಿನ ಆರಂಭ ಒದಗಿಸಿದ ನಾಯಕಿ ಸ್ಮೃತಿ ಮಂದಾನ 34 ಎಸೆತಗಳಲ್ಲಿ 38 ರನ್ ಗಳಿಸಿ ಆಸರೆಯಾದರು. ರಾಧಾ ಯಾದವ್ 18, ಜಾರ್ಜ್ ವಾಲಿ‌ 11 ರನ್ ಬಿಟ್ಟರೆ ಉಳಿದ ಬ್ಯಾಟರ್‌ಗಳು ಎರಡಂಕಿ ದಾಟಲು ಪರದಾಡಿದರು‌. ಡೆಲ್ಲಿ ಪರ ನಂದಿನಿ ಶರ್ಮ 3, ಚಿನೇಲಿ ಹೆನ್ರಿ, ಮೆಜರಿನ್ ಕಾಪ್ ಮತ್ತು ಮಿನ್ನು ಮಣಿ ತಲಾ 2 ವಿಕೆಟ್ ಮತ್ತು ಶ್ರೀಚರಣಿ ಒಂದು ವಿಕೆಟ್ ಉರುಳಿಸಿದರು‌.

ಅಲ್ಪ ಮೊತ್ತ ಬೆನ್ನತ್ತಿದ್ದ ಡೆಲ್ಲಿಗೆ ಆರಂಭಿಕ ಆಘಾತ ನೀಡಿದ ಸಯಾಲಿ ಸತ್ಗಾರೆ ಎರಡು ವಿಕೆಟ್ ಉರುಳಿಸಿ ಭರವಸೆ ಮೂಡಿಸಿದರು. ನಂತರ ಜೊತೆಯಾದ ನಾಯಕಿ ಜೆಮಿಮಾ ಮತ್ತು ಲಾರಾ ಊಲ್ಡ್ವಾರ್ಟ್ ಎಚ್ಚರಿಕೆಯ ಆಟವಾಡುತ್ತಾ ಗೆಲುವಿನ ಸಮೀಪಕ್ಕೆ ತಂಡವನ್ನು ಕೊಂಡೊಯ್ದರು. ಜೆಮಿಮಾ ಔಟಾದ ನಂತರ ಆಗಮಿಸಿದ ಮೆಜರೀನ್ ಕಾಪ್ ಗೆಲುವನ್ನು ಖಾತ್ರಿ ಪಡಿಸಿದರು.

ಡೆಲ್ಲಿ ಪರ ಊಲ್ಡ್ವಾರ್ಟ್ ಅಜೇಯ 42, ಜೆಮಿಮಾ ರೋಡ್ರಿಗಸ್ 24, ಮೆಜರೀನ್ ಕಾಪ್ ಅಜೇಯ 19, ಶಫಾಲಿ ವರ್ಮ 16, ಲಿಜಿ ಲೀ 6 ರನ್ ಗಳಿಸಿದರು. ಡೆಲ್ಲಿ ತಂಡ 15.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.

ಇದರೊಂದಿಗೆ ಈ ಟೂರ್ನಿಯಲ್ಲಿ ಆರ್ಸಿಬಿ ತಂಡ 5 ಗೆಲುವಿನ ನಂತರ ಮೊದಲ ಸೋಲನ್ನನುಭವಿಸಿತು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು