ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಚೊಚ್ಚಲ ಚುನಾವಣೆ ಸಂಜೆ 4 ಗಂಟೆಗೆ ಮುಕ್ತಾಯಗೊಂಡಿದ್ದು, ಒಟ್ಟು 1039 ಮತಗಳು ಚಲಾವಣೆಯಾಗಿವೆ.
ಸುಗಮ ಮತ್ತು ಕ್ಷಿಪ್ರ ಮತಚಲಾವಣೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಒಟ್ಟು 10 ಭೂತ್ ಗಳಲ್ಲಿ ಮತಚಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು. 6 ಐಡಿ ವಿತರಣಾ ಕೌಂಟರ್, 5 ಸಹಾಯಕ ಕೌಂಟರ್ ಹಾಗೂ 10 ಸ್ಲಿಪ್ ಡೆಸ್ಕ್ ಅಳವಡಿಸಲಾಗಿತ್ತು.

ಮತ ಎಣಿಕೆ ಪ್ರಾರಂಭ
ಸಂಜೆ 4:15 ಕ್ಕೆ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಗೊಂಡಿತು. 11 ಸ್ಥಾನಗಳ ಮತ ಎಣಿಕೆ ನಡೆಯುತ್ತಿದೆ, ಸುಮಾರು 7 ಗಂಟೆ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ.

