Breaking News

WPL: ಸೋಫಿ ಮ್ಯಾಜಿಕ್, ಗುಜರಾತ್ ಜೈಂಟ್ಸ್‌ಗೆ ರೋಚಕ ಗೆಲುವು

ವಡೋದರ: ಸೋಫಿ ಡಿವೈನ್ ಅವರ ಅಮೋಘ ಪ್ರದರ್ಶನದಿಂದ ಗುಜರಾತ್ ಜೈಂಟ್ಸ್ ಡಿಲ್ಲಿ ಕ್ಯಾಪಿಟಲ್ಸ್ ವಿರುದ್ದ 3 ರನ್‌ಗಳ ರೋಚಕ ಜಯ ಸಾಧಿಸಿತು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 9 ವಿಕೆಟ್‌ ನಷ್ಟಕ್ಕೆ 174 ರನ್‌ ಕಲೆಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ 8 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

Advertisement

ಇದನ್ನೂ ಓದಿ: Rampur : ಗಂಡನನ್ನೇ ಇಬ್ಬರು ಪತ್ನಿಯರಿಗೆ ಹಂಚಿ ತೀರ್ಪು ನೀಡಿದ ಪಂಚಾಯತ್

ಗುಜರಾಥ್‌ ಪರ ಬೆಥ್‌ ಮೂನಿ 58 ರನ್‌, ಅನುಷ್ಕಾ ಶರ್ಮಾ 39, ಕೊನೆಯಲ್ಲಿ ತನುಜಾ ಕನ್ವರ್‌ 21 ರನ್‌ ಗಳಿಸಿದ ಪರಿಣಾಮ 170 ರನ್‌ಗಳ ಗಡಿಯನ್ನು ದಾಟಿತ್ತು. 20 ಓವರ್‌ಗಳಲ್ಲಿ 174 ರನ್ ಗಳಿಸಿತು.

175 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡದ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ಗುಜರಾತ್ ಬೌಲರ್‌ಗಳ ದಾಳಿಗೆ ಸಿಲುಕಿ ನಿರಂತರ ವಿಕೆಟ್ ಕಳೆದು ಕೊಳ್ಳಲಾರಂಭಿಸಿತು‌.

ಕನ್ನಡತಿ ನಿಕ್ಕಿ ಪ್ರಸಾದ್‌ 47 ರನ್‌ (24 ಎಸೆತ, 9 ಬೌಂಡರಿ) ಸ್ನೇಹ ರಾಣಾ 29 ರನ್‌ (15 ಎಸೆತ, 3 ಬೌಂಡರಿ, 2 ಸಿಕ್ಸ್‌) ಹೊಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರು.

7 ನೇ ವಿಕೆಟ್ ಗೆ ನಿಕಿ ಪ್ರಸಾದ್ ಮತ್ತು ಸ್ನೇಹ ರಾಣ ಜೋಡಿ 31 ಎಸೆತಗಳಲ್ಲಿ 70 ರನ್ ಗಳಿಸಿ ಗೆಲುವಿನ ಭರವಸೆ ಮೂಡಿಸಿದರು.

ಸೋಫಿ ಡಿವೈನ್‌ ಎಸೆದ 17 ನೇ ಓವರ್‌ನಲ್ಲಿ 23 ರನ್‌ (4,4,4,4,1ಲೆಗ್‌ ಬೈ,6) ಬಂದರೆ ಆಶ್ಲೇ ಗಾರ್ಡ್‌ನರ್‌ ಎಸೆದ 19ನೇ ಓವರ್‌ನಲ್ಲಿ 20 ರನ್‌ ಬಂದಾಗ ಪಂದ್ಯ ಡೆಲ್ಲಿ ಕಡೆ ವಾಲಿತ್ತು. ಕೊನೆಯ ಓವರ್‌ನಲ್ಲಿ 9 ರನ್‌ ಬೇಕಿತ್ತು. ಆದರೆ ಸೋಫಿ ಡಿವೈನ್‌ 20ನೇ ಓವರ್‌ನಲ್ಲಿ 5 ರನ್‌ ನೀಡಿ 2 ವಿಕೆಟ್‌ ಕೀಳುವ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಟ್ಟರು.

ಸೋಫಿ ಡಿವೈನ್ 4 ವಿಕೆಟ್, ರಾಜೇಶ್ವರಿ ಗಾಯಕ್‌ವಾಡ್ 3, ಆಶ್ಲೆಗ್ ಗಾರ್ಡನರ್ 1 ವಿಕೆಟ್ ಪಡೆದು ಮಿಂಚಿದರು‌.

ಈ ಗೆಲುವಿನ ಮೂಲಕ ಗುಜರಾತ್‌ 8 ಅಂಕ ಪಡೆದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು