ಮುಂಬೈ: ಬಾರಾಮತಿ ವಿಮಾನ ಅಪಘಾತದ ಪ್ರತ್ಯಕ್ಷದರ್ಶಿಯೊಬ್ಬರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ ಮತ್ತು ವಿಮಾನವು ಭಾರಿ ಬೆಂಕಿಗೆ ಆಹುತಿಯಾದಾಗ ಸ್ಥಳೀಯರು ವಿಮಾನದಲ್ಲಿದ್ದ ಜನರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ದುರಂತ ಘಟನೆಯನ್ನು ವಿವರಿಸುತ್ತಾ, ವಿಮಾನ ಅಪಘಾತಕ್ಕೀಡಾದ ನಂತರ ಕನಿಷ್ಠ ನಾಲ್ಕು ಸ್ಫೋಟಗಳು ಸಂಭವಿಸಿವೆ ಎಂದು ಆ ವ್ಯಕ್ತಿ ಹೇಳಿದರು.

“ಇದು ನಿಜಕ್ಕೂ ನೋವಿನ ಸಂಗತಿ. ವಿಮಾನ ಕೆಳಗಿಳಿದಾಗ, ಅದು ಪತನಗೊಳ್ಳುತ್ತದೆ ಎಂದು ತೋರುತ್ತಿತ್ತು, ನಂತರ ನೆಲಕ್ಕೆ ಅಪ್ಪಳಿಸಿ ಅದು ಸ್ಫೋಟಗೊಂಡಿತು. ಅದರ ನಂತರ, ನಾವು ಇಲ್ಲಿಗೆ ಧಾವಿಸಿ ನೋಡಿದಾಗ ವಿಮಾನ ಬೆಂಕಿಯಲ್ಲಿತ್ತು. ನಂತರ ನಾಲ್ಕರಿಂದ ಐದು ಸ್ಫೋಟಗಳು ಸಂಭವಿಸಿದವು. ಅಜಿತ್ ಪವಾರ್ ಅದರಲ್ಲಿ ಇದ್ದರು ಎನ್ನುವುದನ್ನು ನಂಬಲು ಅಸಾಧ್ಯ” ಎಂದು ತಿಳಸಿದ್ದಾರೆ.
ಇದನ್ನೂ ಓದಿ: Ajit Pawar Death: ಮಹಾರಾಷ್ಟ್ರದಲ್ಲಿ ವಿಮಾನ ಪತನ, ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ!
ಮುಂಬೈನಿಂದ ಬೆಳಿಗ್ಗೆ 8 ಗಂಟೆ ಸುಮಾರಿಗೆ ಹೊರಟಿದ್ದ ಸಣ್ಣ ಚಾರ್ಟರ್ ವಿಮಾನವು 45 ನಿಮಿಷಗಳ ನಂತರ ಬಾರಾಮತಿ ವಿಮಾನ ನಿಲ್ದಾಣದ ಬಳಿ ಇಳಿಯುವ ಪ್ರಯತ್ನದ ಸಮಯದಲ್ಲಿ ಅಪಘಾತಕ್ಕೀಡಾಯಿತು. ಅಪಘಾತದ ಸ್ಥಳದ ದೃಶ್ಯಗಳು ವಿಮಾನದ ಅವಶೇಷಗಳಿಂದ ಬೆಂಕಿ ಮತ್ತು ಹೊಗೆ ಹೊರಬರುತ್ತಿರುವುದನ್ನು ತೋರಿಸಿವೆ. ವಿಮಾನದಲ್ಲಿದ್ದ ಎಲ್ಲಾ ಐದು ಪ್ರಯಾಣಿಕರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವಿಮಾನಯಾನ ಇಲಾಖೆ ತಿಳಿಸಿದೆ.
ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ, “ಇದು ತುಂಬಾ ಆಘಾತಕಾರಿ, ನೋವಿನ ಮತ್ತು ಹೃದಯ ವಿದ್ರಾವಕ. ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದವು, ಆದರೆ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ನಿಜವಾಗಿಯೂ ಬದ್ಧ ವ್ಯಕ್ತಿಯಾಗಿದ್ದರು, ಅವರು ತಮ್ಮ ಕೆಲಸಕ್ಕೆ ಬದ್ಧರಾಗಿದ್ದರು. ಪವಾರ್ ಸಾಹಬ್, ಸುಪ್ರಿಯಾ ಜಿ, ಸುನೇತ್ರಾ ಜಿ, ಪಾರ್ಥ್ ಮತ್ತು ಜೇ ಅವರಿಗೆ ನಾನು ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ಬಾರಾಮತಿಯಲ್ಲಿರುವ ಲಕ್ಷಾಂತರ ಜನರಿಗೆ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ . ಈ ರೀತಿ ಹೋಗುವುದು ತುಂಬಾ ನೋವಿನಿಂದ ಕೂಡಿದೆ” ಎಂದು ಹೇಳಿದರು.
ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರಾಗಿದ್ದರು.
ಅವರು ವಿವಿಧ ಸರ್ಕಾರಗಳಲ್ಲಿ ಆರು ಅವಧಿಗೆ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ಪೃಥ್ವಿರಾಜ್ ಚವಾಣ್, ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಅವರ ಸಚಿವ ಸಂಪುಟಗಳಲ್ಲಿ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು.
ಅವರು ಪತ್ನಿ ಸುನೇತ್ರಾ ಪವಾರ್ ಮತ್ತು ಇಬ್ಬರು ಪುತ್ರರಾದ ಜಯ್ ಮತ್ತು ಪಾರ್ಥ್ ಪವಾರ್ ಅವರನ್ನು ಅಗಲಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

