Breaking News

T20I: ನಾಲ್ಕನೇ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು

ವಿಶಾಖಪಟ್ಟಣ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ನಾಲ್ಕನೇ ಪಂದ್ಯಾಟದಲ್ಲಿ ಭಾರತ 50 ರನ್‌ಗಳ ಅಂತರದಿಂದ ಸೋಲು ಕಂಡಿದೆ.

ಇಲ್ಲಿನ ಎಸಿಎ-ವಿಡಿಸಿಎ ಮೈದಾನದಲ್ಲಿ ನಡೆದ ನಾಲ್ಕನೇ ಟಿ-20 ಪಂದ್ಯಾಟದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೂರು ಪಂದ್ಯಗಳನ್ನು ಸೋತು ಸರಣಿ ಕೈಚೆಲ್ಲಿದ ನಂತರ ನ್ಯೂಜಿಲೆಂಡ್ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಯಿತು.

Advertisement

ಇದನ್ನೂ ಓದಿ: Breaking: ಪುತ್ತೂರಿನಲ್ಲಿ ಹಿಟ್ ಆ್ಯಂಡ್ ರನ್: ಬೈಕ್ ಸವಾರನಿಗೆ ಗಂಭೀರ ಗಾಯ

ಆರಂಭಿಕ ಆಟಗಾರರಾದ ಟಿಂ ಸೈಫರ್ಟ್ ಮತ್ತು ಡೇವನ್ ಕಾನ್ವೆ ಶತಕದ ಜೊತೆಯಾಟದೊಂದಿಗೆ ಭದ್ರ ಬುನಾದಿ ಹಾಕಿ ಕೊಟ್ಟರು. ಸ್ಪೋಟಕ ಇನ್ನಿಂಗ್ಸ್ ಕಟ್ಟಿದ ಸೈಫರ್ಟ್ 3 ಸಿಕ್ಸರ್, 7 ಬೌಂಡರಿಯೊಂದಿಗೆ 36 ಎಸೆತಗಳಲ್ಲಿ 62 ಗಳಿಸಿದರು. ಡೇವನ್ ಕಾನ್ವೆ 3 ಸಿಕ್ಸರ್, 4 ಬೌಂಡರಿಯೊಂದಿಗೆ 23 ಎಸೆತಗಳಲ್ಲಿ 44 ರನ್ ಗಳಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಡೆರೇಲ್ ಮಿಚೆಲ್ 39 ಮತ್ತು ಗ್ಲೆನ್ ಫಿಲಿಪ್ 29 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು.

ಭಾರತದ ಪರ ಅರ್ಶದೀಪ್ ಸಿಂಗ್ ಮತ್ತು ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್, ಬುಮ್ರಾ ಮತ್ತು ರವಿ ಬಿಶ್ನೊಯ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಭಾರತ ಮೊದಲ ಎಸೆತದಲ್ಲೇ ಅಭಿಶೇಕ್ ಶರ್ಮಾರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಗಟ್ಟಿಯಾಗಿ ನಿಂತ ಶಿವಮ್ ದುಬೆ ತಮ್ಮ ಅರ್ಧಶತಕ ಸಿಡಿಸಿ ತಂಡಕ್ಕೆ ಭರವಸೆ ಮೂಡಿಸಿದರು. 23 ಎಸೆತಗಳಲ್ಲಿ 7 ಸಿಕ್ಸರ್, 3 ಬೌಂಡರಿಯೊಂದಿಗೆ 65 ರನ್ ಗಳಿಸಿ ದುರದೃಷ್ಟಕರ ರೀತಿಯಲ್ಲಿ ರನ್ ಔಟ್ ಆದರು. ರಿಂಕು ಸಿಂಗ್ 39, ಸಂಜು ಸ್ಯಾಮ್‌ಸನ್ 24 ರನ್ ಬಿಟ್ಟರೆ ಬೇರೆ ಯಾವೊಬ್ಬ ಬ್ಯಾಟರ್ ಕೂಡ ಪ್ರತಿರೋಧ ಒಡ್ಡಲಿಲ್ಲ.

ನ್ಯೂಜಿಲೆಂಡ್ ಪರ ನಾಯಕ ಸ್ಯಾಂಟ್ನರ್ 3, ಜಾಕೊಬ್ ಢಫಿ ಮತ್ತು ಇಶ್ ಸೋಧಿ 2, ಮ್ಯಾಟ್ ಹೆನ್ರಿ ಮತ್ತು ಝಕರಿ ಫೋಕ್ಸ್ ತಲಾ ಒಂದು ವಿಕೆಟ್ ಪಡೆದರು.

ಅಂತಿಮವಾಗಿ ಭಾರತ 18.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 164 ರನ್ ಗಳಿಸಲಷ್ಟೇ ಶಕ್ತವಾಯಿತು‌.‌ ಇದೊಂದಿಗೆ 50 ರನ್‌ಗಳ ಸೋಲು ಅನುಭವಿಸಿತು‌.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು