Breaking News

Supreme Court : ಮಹಿಳಾ ಸಬಲೀಕರಣದತ್ತ ಐತಿಹಾಸಿಕ‌ ಹೆಜ್ಜೆ; ಸುಪ್ರೀಂ ತೀರ್ಪಿಗೆ ಶ್ಲಾಘನೆ

ನವದೆಹಲಿ: ಬಾಲಕಿಯರ ಮಾಸಿಕ ಸ್ವಚ್ಛತೆ (Menstrual Hygiene)ಯನ್ನು ಬದುಕಿನ ಹಕ್ಕಿನ ಅವಿಭಾಜ್ಯ ಭಾಗವೆಂದು ಘೋಷಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಮಹಿಳೆಯರ ಗೌರವ, ಆರೋಗ್ಯ ಹಾಗೂ ಶಿಕ್ಷಣದ ದಿಕ್ಕಿನಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಸುಪ್ರೀಂ ಕೋರ್ಟ್, ಮಾಸಿಕ ಸ್ವಚ್ಛತೆಯ ಲಭ್ಯತೆ ಬಾಲಕಿಯರ ಜೀವಿಸುವ ಹಕ್ಕು, ಗೌರವ, ಆರೋಗ್ಯ ಮತ್ತು ಶಿಕ್ಷಣದ ಹಕ್ಕಿನ ಭಾಗ ಎಂದು ಸ್ಪಷ್ಟಪಡಿಸಿದೆ. ಸಂವಿಧಾನದ ಆರ್ಟಿಕಲ್ 21 ಅಡಿಯಲ್ಲಿ, ಬಾಲಕಿಯರ ಆರೋಗ್ಯ, ವಿಶೇಷವಾಗಿ ತಿಂಗಳ ಮುಟ್ಟಿನ ಆರೋಗ್ಯವನ್ನು ರಕ್ಷಿಸುವುದು ಸರ್ಕಾರದ ಧನಾತ್ಮಕ ಹೊಣೆಗಾರಿಕೆ ಎಂದು ಕೋರ್ಟ್ ಹೇಳಿದೆ.

Advertisement

ಇದನ್ನೂ ಓದಿ : Arjith Singh : ನಿವೃತ್ತಿ ಘೋಷಣೆ ಬಳಿಕ ಅರ್ಜಿತ್ ಸಿಂಗ್ ಮೊದಲ ಹಾಡು ನಾಳೆ ಬಿಡುಗಡೆ

ಶಾಲೆಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ಕಡ್ಡಾಯ ;
ಈ ತೀರ್ಪಿನೊಂದಿಗೆ, ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಕಡ್ಡಾಯ ನಿರ್ದೇಶನಗಳನ್ನು ನೀಡಿದ್ದು, ಎಲ್ಲಾ ಶಾಲೆಗಳಲ್ಲಿ ಉಚಿತ ಸ್ಯಾನಿಟರಿ ನ್ಯಾಪ್ಕಿನ್‌ಗಳ ಲಭ್ಯತೆ, ನೀರಿನ ವ್ಯವಸ್ಥೆ, ಮುಟ್ಟಿನ ಆರೋಗ್ಯ ಅರಿವು ಕಾರ್ಯಕ್ರಮಗಳು, ಜಾರಿಗೆ ತರಬೇಕು ಎಂದು ಆದೇಶಿಸಿದೆ.

127 ಪುಟಗಳ ತೀರ್ಪಿನಲ್ಲಿ, ಮಾಸಿಕ ಸ್ವಚ್ಛತಾ ವಸ್ತುಗಳ ಕೊರತೆಯಿಂದ ಅನೇಕ ಬಾಲಕಿಯರು ಬಟ್ಟೆ ತುಂಡುಗಳು ಅಥವಾ ದೀರ್ಘಕಾಲ ಬಳಕೆಯ ಪ್ಯಾಡ್‌ಗಳನ್ನು ಉಪಯೋಗಿಸಬೇಕಾಗುತ್ತಿದೆ. ಇದು ಅವರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದು ಕೋರ್ಟ್ ಗಮನಿಸಿದೆ. ಮುಂಬೈನ ಲೈಂಗಿಕ ಆರೋಗ್ಯ ತಜ್ಞ ಡಾ. ಇಶ್ವರ್ ಗಿಲಾಡಾ ಮಾತನಾಡಿ, “ಮಾಸಿಕ ಆರೋಗ್ಯವನ್ನು ಲೈಂಗಿಕ ಆರೋಗ್ಯದ ಭಾಗವನ್ನಾಗಿ ಮಾಡಬೇಕು. ಇದು ಕೇವಲ ಮಹಿಳೆಯರ ಜವಾಬ್ದಾರಿಯಲ್ಲ, ಸಮಾಜದ ಹೊಣೆಗಾರಿಕೆ,” ಎಂದು ಹೇಳಿದ್ದಾರೆ. ಉಚಿತ ಸ್ಯಾನಿಟರಿ ಪ್ಯಾಡ್ ನೀಡುವುದಷ್ಟೇ ಅಲ್ಲ, ಅವುಗಳ ಸುರಕ್ಷಿತ ವಿಸರ್ಜನೆಯೂ ಅಷ್ಟೇ ಮುಖ್ಯ ಎಂದು ಹೇಳಿದ ಅವರು, ಆರೋಗ್ಯ ಸಚಿವಾಲಯವು ಮುಂದಿನ ಆದೇಶಕ್ಕಾಗಿ ಕಾಯದೆ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್ ವ್ಯವಸ್ಥೆ ಜಾರಿಗೊಳಿಸಬೇಕೆಂದು ಸಲಹೆ ನೀಡಿದ್ದಾರೆ.
ಈ ತೀರ್ಪು, ಮಾಸಿಕವನ್ನು ಕಳಂಕವಲ್ಲದೆ ಸಹಜ ಜೈವಿಕ ಪ್ರಕ್ರಿಯೆಯಾಗಿ ನೋಡುವ ಸಮಾಜ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು