ವಡೋದರಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡದ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತು.
ಡಾಸ್ ಸೋತು ಬ್ಯಾಟಿಂಗ್ ಮಾಡಿದ ವಾರಿಯರ್ಸ್, 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಬಾರಿಸಿತು. ತಂಡದ ಪರ ದೀಪ್ತಿ ಶರ್ಮಾ 24 ರನ್ ಬಾರಿಸಿದರೆ, ಸಿಮ್ರಾನ್ ಶೇಖ್ 22, ಶಿಖಾ ಪಾಂಡೆ 23*, ಚಾರ್ಲಿ ನಾಟ್ 12, ಹರ್ಲೀನ್ ಡಿಯೋಲ್ 3, ಡಿಯಾಂಡ್ರಾ ಡಾಟಿನ್ 5, ಶಿಪ್ರಾ ಗಿರಿ 9, ಸೋಫಿ ಎಕ್ಲೇಸ್ಟೋನ್ 10*, ಆಶಾ ಸೋಭಾನ 13 ರನ್ ಗಳಿಸಿದರು. ಮೆಗ್ ಲ್ಯಾನಿಂಗ್ ಶೂನ್ಯ ಸುತ್ತಿದರು.

ಇದನ್ನೂ ಓದಿ: T20: ಇಶನ್ ಕಿಶನ್ ಶತಕ, ಸೂರ್ಯಕುಮಾರ್ ಅರ್ಧ ಶತಕ, ಅರ್ಶದೀಪ್ 5 ವಿಕೆಟ್, ಭಾರತಕ್ಕೆ ಸರಣಿ
223ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ, 18.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 126 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ತಂಡದ ಪರ ಲಾರಾ ವೋಲ್ವಾರ್ಡ್ 47 ರನ್ ಬಾರಿಸಿದರೆ, ಲಿಜೆಲ್ ಲೀ 10, ಶಫಾಲಿ ಶರ್ಮಾ 29, ಜೆಮಿಮಾ ರೋಡ್ರಿಗಸ್ 34*, ಚಿನೆಲ್ಲೆ ಹೆನ್ರಿ 1. ನಿಕಿ ಪ್ರಸಾದ್ 4* ರನ್ ಗಳಿಸಿದರು.
ವಾರಿಯರ್ಸ್ ಪರ ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ, ದೀಯಂದ್ರ ಡಾಟಿನ್, ಶಿಖಾ ಪಾಂಡೆ, ಸೋಫಿ ಎಕ್ಲೆಸ್ಟೋನ್ ತಲಾ 1 ವಿಕೆಟ್ ಪಡೆದರು. ಡೆಲ್ಲಿ ಪರ 3 ವಿಕೆಟ್ ಪಡೆದ ಮರಿಜಾನ್ನೆ ಕಪ್ ಅವರು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚಿನೆಲ್ಲೆ ಹೆನ್ರಿ, ನಲ್ಲಪುರರೆಡ್ಡಿ ಚರಣಿ ತಲಾ 2 ವಿಕೆಟ್ ಪಡೆದರೆ, ಮಿನ್ನು ಮಣಿ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

