ಒಂದು ಕಡೆಯಿಂದ ದೂರದ ಪ್ರದೇಶಕ್ಕೆ ಬೇಗನೇ ತಲುಪಲು ವಿಮಾನ ಅನುಕೂಲಕರವಾಗಿದೆ. ಶಾಂತವಾಗಿ ಪ್ರಯಾಣಿಸಬಹುದಾದ ವಿಮಾನದಲ್ಲಿ ಕೆಲವೊಮ್ಮೆ ಅಹಿತಕರ, ಕಹಿ ಘಟನೆಗಳು ನಡೆಯುವುದನ್ನು ನೋಡುತ್ತಿರುತ್ತೇವೆ. ತಡವಾದ ಪ್ರಯಾಣ, ಇಕ್ಕಟ್ಟಿನ ಆಸನ, ಅಳುವ ಮಕ್ಕಳು. ಈ ಎಲ್ಲದರ ನಡುವೆ ಆಕಾಶದಲ್ಲಿ ಹಾರುತ್ತಿರುವ ವಿಮಾನದಲ್ಲಿ ಒಬ್ಬ ಪ್ರಯಾಣಿಕ ಸಂಪೂರ್ಣವಾಗಿ ಸಹನೆ ಕಳೆದುಕೊಂಡು ಬಟ್ಟೆ ಬಿಚ್ಚಿ ರಂಪಾಟ ನಡೆಸಿದರೆ ಹೇಗಾಗಬಹುದು?
ಇಂತಹ ನೈಜ ಘಟನೆಯೊಂದು ಏರ್ಏಷಿಯಾ ವಿಮಾನದಲ್ಲಿ ನಡೆದಿದೆ. ಈತನ ಹುಚ್ಚಾಟಕ್ಕೆ ವಿಮಾನವನ್ನು ತುರ್ತು ಭೂಸ್ಪರ್ಷ ಮಾಡುವಂತಾಯಿತು. ಇತರ ಪ್ರಯಾಣಿಕರು ತಲುಬೇಕಿದ್ದ ಸ್ಥಳಕ್ಕೆ ತಡವಾಗಿ ತಲುಪುವಂತಾಯಿತು. ಸದ್ಯ ವಿಮಾನದಲ್ಲಿ ರಂಪಾಟ ನಡೆಸಿದ ವ್ಯಕ್ತಿ ರಷ್ಯನ್ ಭಾಷೆಯಲ್ಲಿ ಮಾತನಾಡುತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜನವರಿ 29ರಂದು, ಏರ್ಏಷಿಯಾ ವಿಮಾನ FD647 ವಿಯೆಟ್ನಾಂನ ನಾ ಟ್ರಾಂಗ್ ನಗರದಿಂದ ಥೈಲ್ಯಾಂಡ್ನ ಬ್ಯಾಂಕಾಕ್ ಕಡೆಗೆ ಪ್ರಯಾಣ ಬೆಳೆಸಿತ್ತು. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ತಡವಾಗಿದ್ದರಿಂದ ಪ್ರಯಾಣಿಕರೆಲ್ಲರೂ ದಣಿದಿದ್ದರು ಮತ್ತು ಬೇಗ ತಲುಪಬೇಕೆಂದುಕೊಂಡಿದ್ದರು. ಆದರೆ ಆಕಾಶದಲ್ಲಿ ಹೋಗುತ್ತಿದ್ದಾಗ ರಷ್ಯನ್ ಭಾಷೆ ಮಾತನಾಡುತ್ತಿದ್ದ ಪ್ರಯಾಣಿಕ ವಿಚಿತ್ರವಾಗಿ ಹಾಗೂ ಆಕ್ರಮಣಕಾರಿ ವರ್ತನೆ ತೋರಲು ಪ್ರಾರಂಭಿಸಿದ್ದಾನೆ.
ಶಾಂತವಾಗಿದ್ದ ಪ್ರಯಾಣ ಕ್ಷಣಾರ್ಧದಲ್ಲೇ ಅರಾಜಕತೆಯಾಗಿ ಬದಲಾಗಿತು. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ, ಸಿಬ್ಬಂದಿ ವಿಮಾನವನ್ನು ಬ್ಯಾಂಕಾಕ್ನ ಡಾನ್ ಮುವಾಂಗ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷ ಮಾಡುವಂತಾಯಿತು.

ಇದನ್ನೂ ಓದಿ: Viral: ಜೈಲಿನೊಳಗೆ ಪ್ರಿಯಕರನ ಜೊತೆ ರೀಲ್ಸ್ ಮಾಡಿದ ಯುವತಿ
ಬಟ್ಟೆ ತೆಗೆದು ಕ್ಯಾಬಿನ್ನಲ್ಲಿ ಗೊಂದಲ
ವಿಮಾನ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ, ಆ ವ್ಯಕ್ತಿ ತನ್ನ ಬಟ್ಟೆಗಳನ್ನು ಒಂದೊಂದಾಗಿ ತೆಗೆದು ಕೊನೆಗೆ ಒಳಉಡುಪಿನಲ್ಲಿ ಮಾತ್ರ ಉಳಿದ. ಒಳಉಡುಪಿನಲ್ಲಿ ವಿಮಾನದಲ್ಲಿ ಅತ್ತಿಂದಿತ್ತ ನಡೆದುಕೊಂಡು, ಆಸನಗಳ ನಡುವೆ ಹಾರಾಡಿದ್ದಲ್ಲದೆ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಜಗಳವಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.
Русский турист на рейсе Нячанг — Бангкок после посадки прыгнул без трапа, повредил ногу и попытался сбежать.
Не дотерпел – сильно русский дух стремился наружу из тесной оболочки самолета! pic.twitter.com/EgsDP4xzMj— FAKE OFF (@fakeofforg) January 30, 2026
ಒಂದು ಸಂದರ್ಭದಲ್ಲಿ ಅವನು ಇಂಗ್ಲಿಷ್ನಲ್ಲಿ “ನನ್ನನ್ನು ಮುಟ್ಟಬೇಡಿ” ಎಂದು ಕೂಗಿ, ವಿಮಾನದ ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದಾನೆ. ಸಿಬ್ಬಂದಿಗೆ ಬಾಗಿಲು ತೆರೆಯಲು ಹೇಳುವಂತೆ ಇತರ ಪ್ರಯಾಣಿಕರ ಮೇಲೂ ಕೂಗಾಡಿದ್ದಾನೆ. ಶೌಚಾಲಯದ ಬಾಗಿಲನ್ನು ಬಡಿದು, ಸುತ್ತಮುತ್ತಲವರೊಂದಿಗೆ ಜಗಳವಾಡುತ್ತಲೇ ಇದ್ದನು. ರಷ್ಯನ್ ಮಾಧ್ಯಮ ವರದಿಗಳ ಪ್ರಕಾರ, ಅವನು ಮದ್ಯದ ಅಮಲಿನಲ್ಲಿ ಈ ರೀತಿ ವರ್ತಿಸಿರಬಹುದು.
ವಿಮಾನದಿಂದ ಜಿಗಿಯುವುದಾಗಿ ರಷ್ಯನ್ ಭಾಷೆಯಲ್ಲಿ ಕೂಗಾಡುತ್ತಿದ್ದ ವ್ಯಕ್ತಿಯನ್ನು ಸಹ ಪ್ರಯಾಣಿಕರು ಶಾಂತಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಪರಿಸ್ಥಿತಿ ಕೈಮೀರುತ್ತಿದ್ದಂತೆ, ಕ್ಯಾಬಿನ್ ಸಿಬ್ಬಂದಿ ಕ್ಯಾಪ್ಟನ್ಗೆ ಮಾಹಿತಿ ನೀಡಿ ತುರ್ತು ಭೂಸ್ಪರ್ಷಕ್ಕೆ ಸೂಚಿಸುತ್ತಾರೆ.
ವಿಮಾನ ಲ್ಯಾಂಡ್ ಆಗಿ ಬಾಗಿಲು ತೆರೆಯುತ್ತಿದ್ದಂತೆ ರಷ್ಯನ್ ವ್ಯಕ್ತಿ ಹೊರಗೆ ಜಿಗಿದು ಪರಾರಿಯಾಗಲು ಯತ್ನಿಸೀದಾಗ ಕಾಲಿಗೆ ಗಾಯವಾಗಿದೆ. ಆದರೂ ಕುಂಟುತ್ತಾ ಓಡಿದ ರಷ್ಯನ್ ವ್ಯಕ್ತಿಯನ್ನು ಥಾಯ್ ಪೊಲೀಸರು ಡಾಮಾರ್ ರಸ್ತೆಯ ರನ್ವೇನಲ್ಲಿ ಸೆರೆಹಿಡಿದಿದ್ದಾರೆ. ಈ ಪ್ರಯಾಣಿಕನಿಗೆ ಥಾಯ್ ಕಾನೂನಿನಡಿ ಭಾರಿ ದಂಡ ಅಥವಾ ಜೈಲು ಶಿಕ್ಷೆಯೂ ವಿಧಿಸಲಾಗುವ ಸಾಧ್ಯತೆ ಇದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

