Breaking News

ಮೆಟ್ರಿಕ್ ಮೇಳ: ಸಜಂಕಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಮಳಿಗೆ ತೆರೆದು ವ್ಯಾಪಾರ ನಡೆಸಿದ ವಿದ್ಯಾರ್ಥಿಗಳು

Matriculation Fair: Sajankadi Government Primary School children engaged in business activities for one day

ಪುತ್ತೂರು: ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಸಜಂಕಾಡಿ ಸ.ಹಿ.ಪ್ರಾ ಶಾಲೆಯಲ್ಲಿ ಮೆಟ್ರಿಕ್ ಮೇಳ‌ ನಡೆಸಲಾಯಿತು.

ವಿದ್ಯಾರ್ಥಿಗಳು ತಮ್ಮ‌ ಮನೆಯಲ್ಲಿ ಬೆಳೆದ ಬಸಳೆ, ತೊಂಡೆಕಾಯಿ ಇನ್ನಿತರ ತರಕಾರಿಗಳು, ಪಾನಿಪುರಿ, ಚರುಂಬುರಿ ವಿವಿಧ ಬಗೆಯ ತಿಂಡಿ ತಿನಿಸುಗಳು, ಪಾನೀಯಗಳು, ಎಳನೀರು, ಕಬ್ಬು ಜ್ಯೂಸ್ ಮಾತ್ರವಲ್ಲದೆ ವಿವಿಧ ಬಗೆಯ ಪ್ಯಾನ್ಸಿ ವಸ್ತುಗಳನ್ನು ಮಾರಾಟ ಮಾಡಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ವ್ಯಾಪಾರದಲ್ಲಿ ತೊಡಗಿಸಿಕೊಂಡರು.

Advertisement

ಇದಕ್ಕೂ ಮುನ್ನ ವ್ಯಾಪಾರ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಕುಂಬ್ರ ಸಮೂಹ ಸಂಪನ್ಮೂಲ ವ್ಯಕ್ತಿ ದೇವಪ್ಪ, ಇಂತಹ ಮೆಟ್ರಿಕ್ ಮೇಳಗಳು ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸುವಲ್ಲಿ ಉತ್ತಮ ವೇದಿಕೆಯಾಗಿದೆ ಎಂದರು.

ಇದನ್ನೂ ಓದಿ: Scholarship : 3 ಕೋಟಿ ರೂ. ವಿದ್ಯಾರ್ಥಿವೇತನ ಪಡೆದ ಅವಳಿ ಸಹೋದರಿಯರು !

ಮೆಟ್ರಿಕ್ ಮೇಳದ ಫಲಕ ಅನಾವರಣ ಗೊಳಿಸಿದ ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ರವಿರಾಜ್ ರೈ ಮಾತನಾಡಿ, ಮಕ್ಕಳಲ್ಲಿ ಉತ್ಸಾಹದ ಜೊತೆಗೆ ವ್ಯವಹಾರ ಜ್ಞಾನ ಬೆಳೆಸುವಲ್ಲಿ ಈ ಮೇಳ ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಯಶೋಧ, ಉಪಾಧ್ಯಕ್ಷ ಇಬ್ರಾಹಿಂ ಸೇರಿದಂತೆ ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ. ಸ್ವಾಗತಿಸಿ ವಂದಿಸಿದರು. ಪದವೀಧರ ಶಿಕ್ಷಕ ಗಣೇಶ ನಾಯಕ್ ಪುತ್ತೂರು, ಅತಿಥಿ ಶಿಕ್ಷಕಿ ಆಯಿಷತ್ ಮಿಸ್ರಿಯ ಸಹಕರಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು