Breaking News

T20 Worldcup: ರೋಚಕ ಪಂದ್ಯ ಗೆದ್ದ ಪಾಕಿಸ್ತಾನ

ಕೊಲೊಂಬೊ: ಬಹುನಿರೀಕ್ಷಿತ ಟಿ-20 ವಿಶ್ವಕಪ್ ಪಂದ್ಯಾಟಕ್ಕೆ ಚಾಲನೆ ದೊರೆತಿದೆ. ಇಂದು ಬೆಳಿಗ್ಗೆ ನಡೆದ ಮೊದಲ ಪಂದ್ಯಾಟದಲ್ಲಿ ನೆದರ್ಲೆಂಡ್ಸ್‌ ತಂಡದ ವಿರುದ್ಧ ಪಾಕಿಸ್ತಾನ ರೋಚಕ ಜಯ ಗಳಿಸಿದೆ.

ಇಲ್ಲಿನ ಸಿನ್ಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಮೊದಲ ಪಂದ್ಯಾಟದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

Advertisement

ಇದನ್ನೂ ಓದಿಕ್ರಿಕೆಟ್‌ ಆಡುವಾಗಲೇ ರತ್ನಗಿರಿಯ ಕ್ರಿಕೆಟಿಗನ ದುರ್ಮರಣ: ಇಲ್ಲಿದೆ ನೋಡಿ ವಿಡಿಯೋ

ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್‌ ತಂಡ 19.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 147 ರನ್ ಕಲೆ ಹಾಕಿತು. ನಾಯಕ ಸ್ಕಾಟ್ ಎಡ್ವರ್ಡ್ಸ್ 37, ಬಾಸ್ ಡಿ ಲೀಡ್ 30, ಮೈಕೆಲ್ ಲೆವಿಟ್ 24, ಕೊಲಿನ್ ಅಕ್ರಕ್‌ಮನ್ 20, ಆಯರ್ನ್ ದತ್ತ್ 13, ಜಾಕ್ ಲಿಯೋನ್ 9, ರವೋಲ್ಫ್ ವ್ಯಾನ್ ಡರ್ ವರ್ವೆ 4 ರನ್ ಗಳಿಸಿ ತಂಡಕ್ಕೆ ಆಧಾರವಾದರು.

ಪಾಕಿಸ್ತಾನ ಪರ ಸಲ್ಮಾನ್ ಮಿರ್ಜ 3, ಮೊಹಮ್ಮದ್ ನವಾಜ್, ಅಬ್ರರ್ ಅಹಮ್ಮದ್, ಸೈಮ್ ಅಯೂಬ್ ತಲಾ 2, ಶಹೀನ್ ಅಫ್ರಿದಿ 1 ವಿಕೆಟ್ ಪಡೆದರು.

ಚೇಸಿಂಗ್ ಆರಂಭಿಸಿದ ಪಾಕಿಸ್ತಾನಕ್ಕೆ ಉತ್ತಮ ಆರಂಭ ದೊರಕಿದರೂ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡು ಸೋಲಿನ ಭೀತಿಯಲ್ಲಿ ಇತ್ತು. 19ನೇ ಓವರ್‌ನಲ್ಲಿ ಫಹೀಮ್ ಅಶ್ರಫ್ 3 ಸಿಕ್ಸರ್ ಮತ್ತು‌ ಒಂದು ಬೌಂಡರಿ ಬಾರಿಸುವ ಮೂಲಕ ತಂಡವನ್ನು ಜಯದ ಹೊಸ್ತಿಲಿಗೆ ಕೊಂಡೊಯ್ದರು.

ಅಂತಿಮವಾಗಿ ಪಾಕಿಸ್ತಾನ 19.3 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

ಪಾಕಿಸ್ತಾನ ಪರ ಸಹಿಬ್ಜಾದ ಫರ್ಹಾನ್ 47, ಫಹೀಮ್ ಅಶ್ರಫ್ ಅಜೇಯ 29, ಸೈಮ್ ಅಯೂಬ್ 24, ಬಾಬರ್ ಅಜಾಮ್ 15, ಸಲ್ಮಾನ್ ಅಘಾ 12 ರನ್ ಗಳಿಸಿದರು.

ನೆದರ್ಲೆಂಡ್ಸ್‌ ಪರ ಆರ್ಯನ್ ದತ್ತ್, ಪಾಲ್ ವಾನ್ ಮೀಕರಿನ್ ತಲಾ 2 ವಿಕೆಟ್, ಲೋಗಾನ್ ವಾನ್ ಬೀಕ್, ರವಾಲ್ಫ್ ಮರ್ವೆ ಮತ್ತು ಕೈಲ್ ಕ್ಲಿನ್ ತಲಾ ಒಂದು ವಿಕೆಟ್ ಪಡೆದರು.

ಸ್ಫೋಟಕ ಇನ್ನಿಂಗ್ಸ್ ಆಡಿದ ಫಹೀಮ್ ಅಶ್ರಫ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು