Breaking News

ಟಿಮ್‌ ಸೀಫರ್ಟ್‌ ಅರ್ಧಶತಕ; ಅಫ್ಘಾನಿಸ್ತಾನದ ವಿರುದ್ಧ ನ್ಯೂಜಿಲ್ಯಾಂಡ್‌ಗೆ ಭರ್ಜರಿ ಜಯ

T20 World Cup Tim Seifert hits half-century; New Zealand beats Afghanistan by 5 wickets

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಟಿಮ್‌ ಸೀಫರ್ಟ್‌ ಅವರು ಸಿಡಿಸಿದ ಅರ್ಧಶತಕದಾಟಕ್ಕೆ ನ್ಯೂಜಿಲ್ಯಾಂಡ್‌ ತಂಡವು 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ, 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 182 ರನ್‌ ಬಾರಿಸಿದರು. ತಂಡದ ಪರ ಗುಲ್ಬಾದಿನ್‌ ನಾಯಿಬ್‌ 63 (35 ಎಸೆತ, 3 ಬೌಂಡರಿ ಹಾಗೂ 4 ಸಿಕ್ಸ್)‌ ರನ್‌ ಸಿಡಿಸಿದರೆ, ಸೆಡಿಕುಲ್ಲಾ ಅಟಲ್‌ 29, ರಹಮಾನುಲ್ಲಾ ಗುರ್ಬಾಜ್‌ 27, ಇಬ್ರಾಹಿಂ ಜದ್ರಾನ್‌ 10, ದರ್ವಿಶ್‌ ಅಬ್ದುಲ್‌ ರಸೂಲಿ 20, ಅಜ್ಮತುಲ್ಲಾ ಓಮರ್ಜೈ 14, ಮೊಹಮ್ಮದ್‌ ನಬಿ 10* ರನ್‌ ಗೀಸಿದರು.

Advertisement

ಇದನ್ನೂ ಓದಿ: T20 Worldcup: ಸೂರ್ಯಕುಮಾರ್ ಏಕಾಂಗಿ ಹೋರಾಟ, ಭಾರತಕ್ಕೆ ಜಯ

183 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್‌, 17.5 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 183 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ತಂಡದ ಪರ ಟಿಮ್‌ ಸೀಫರ್ಟ್‌ 42 ಎಸೆತಗಳಲ್ಲಿ 65 ರನ್‌ ಬಾರಿಸಿದರು. ಇದರಲ್ಲಿ 7 ಬೌಂಡರಿ ಹಾಗೂ 3 ಸಿಕ್ಸ್‌ಗಳು ಸೇರಿವೆ. ಉಳಿದಂತೆ, ಗ್ಲೆನ್‌ ಫಿಲಿಪ್ಸ್‌ 42, ಮಾರ್ಕ್‌ ಚಾಪ್ಮನ್‌ 28, ಡ್ಯಾರಿಲ್‌ ಮಿಚೆಲ್‌ 25, ಮಿಚೆಲ್‌ ಸ್ಯಾಂಟ್ನರ್‌ 17, ಫಿನ್‌ ಅಲೆನ್‌ 1 ರನ್‌ ಗಳಿಸಿದರೆ, ರಾಚಿನ್‌ ರವೀಂದ್ರ ಶೂನ್ಯ ಸುತ್ತಿದರು.

ಅಫ್ಘಾನಿಸ್ತಾನದ ಬೌಲರ್‌ಗಳಾದ ಮೊಹಮ್ಮದ್‌ ನಬಿ‌, ರಶೀದ್‌ ಖಾನ್, ಅಜ್ಮತುಲ್ಲಾ ಒಮರ್ಜಾಯ್‌ ತಲಾ 1 ವಿಕೆಟ್‌, ಉರ್‌ ರೆಹಮಾನ್‌ 2 ವಿಕೆಟ್‌ ಪಡೆದರು. ನ್ಯೂಜಿಲ್ಯಾಂಡ್‌ ಬೌಲರ್‌ಗಳಾದ ಲಾಕಿ ಫರ್ಗುಸನ್‌ 2 ವಿಕೆಟ್‌ ಪಡೆದರೆ, ರಾಚಿನ್‌ ರವೀಂದ್ರ, ಜಾಕೋಬ್‌ ಡಫಿ, ಮ್ಯಾಟ್‌ ಹೆನ್ರಿ ತಲಾ 1 ವಿಕೆಟ್‌ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು