ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ವಿಶ್ವಕಪ್ ಕ್ರಿಕೆಟ್‌ನಲ್ಲಿ ಇನ್ನೂ ಮಗುವಾಗಿರುವ ನೇಪಾಳದ ವಿರುದ್ಧ ಗೆಲ್ಲಲು ಅನುಭವಿ ತಂಡ ಇಂಗ್ಲೆಂಡ್ ಪರದಾಡಿತು.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಪೇರಿಸಿತು. ತಂಡದ ಪರ ಜಾಕೋಬ್ ಬೆಥೆಲ್ 35 ಎಸೆತಗಳಲ್ಲಿ 55 ರನ್ ಬಾರಿಸಿದರು. ಇದರಲ್ಲಿ 4 ಬೌಂಡರಿ ಹಾಗೂ 4 ಸಿಕ್ಸ್‌ಗಳು ಸೇರಿವೆ. ಮತ್ತೊಬ್ಬ ಆಟಗಾರ ಹ್ಯಾರಿ ಬ್ರೂಕ್ 32 ಎಸೆತಗಳಲ್ಲಿ 53 ರನ್ ಬಾರಿಸಿದರು. ಇದರಲ್ಲಿ 4 ಬೌಂಡರಿ ಹಾಗೂ 3 ಸಿಕ್ಸ್‌ಗಳು ಸೇರಿವೆ.

ಉಳಿದಂತೆ, ಜೋಸ್ ಬಟ್ಲರ್ 26, ವಿಲ್ ಜ್ಯಾಕ್ಸ್ 39*, ಫಿಲ್ ಸಾಲ್ಟ್ 1, ಟಾಮ್ ಬ್ಯಾಂಟನ್ 2, ಸ್ಯಾಮ್ ಕರನ್ 2, ಜೋಫ್ರಾ ಆರ್ಚರ್ 1 ರನ್ ಗಳಿಸಿದರು. 185 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ನೇಪಾಳ, 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 180 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ: ಟಿಮ್ ಸೀಫರ್ಟ್ ಅರ್ಧಶತಕ; ಅಫ್ಘಾನಿಸ್ತಾನದ ವಿರುದ್ಧ ನ್ಯೂಜಿಲ್ಯಾಂಡ್‌ಗೆ ಭರ್ಜರಿ ಜಯ
ತಂಡದ ಪರ ದೀಪೇಂದ್ರ ಸಿಂಗ್ ಐರೀ 44, ಲೋಕೇಶ್ ಬಾಮ್ 39*, ರೋಹಿತ್ ಪೌಡೆಲ್ 39, ಕುಶಾಲ್ ಭುರ್ತೇಲ್ 29, ಆಸಿಫ್ ಶೇಖ್ 7, ಆರಿಫ್ ಶೇಖ್ 10, ಗುಲ್ಶನ್ ಕುಮಾರ್ ಝಾ 1, ಕರಣ್ ಕೆ.ಸಿ. 1* ರನ್ ಗಳಿಸಿದರು.
ಇಂಗ್ಲೆಂಡ್ ಬೌಲರ್‌ಗಳಾದ ಲಿಯಾಮ್ ಡಾಸನ್ 2 ವಿಕೆಟ್, ವಿಲ್ ಜ್ಯಾಕ್ಸ್, ಸ್ಯಾಮ್ ಕರನ್, ಜೋಫ್ರಾ ಆರ್ಚರ್, ಲ್ಯೂಕ್ ವುಡ್ ತಲಾ 1 ವಿಕೆಟ್ ಪಡೆದರು. ನೇಪಾಳ ಪರ ನಂದನ್ ಯಾದವ್, ದೀಪೇಂದ್ರ ಸಿಂಗ್ ಐರೀ ತಲಾ 2 ವಿಕೆಟ್, ಸಂದೀಪ್ ಲಮಿಚಾನೆ, ಶೇರ್ ಮಲ್ಲಾ ತಲಾ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

