ಚೆನ್ನೈ: ಟಿ-20 ವಿಶ್ವಕಪ್ನಲ್ಲಿ ದಾಖಲೆಯ ಚೇಸಿಂಗ್ ಮೂಲಕ ನ್ಯೂಜಿಲೆಂಡ್ ತಂಡ ಯುಎಇ ತಂಡದ ವಿರುದ್ಧ ‘ಡಿ’ ಗುಂಪಿನ ಪಂದ್ಯದಲ್ಲಿ ಸುಲಭದ ಜಯ ಗಳಿಸಿದೆ.
ಇಲ್ಲಿ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯಾಟದಲ್ಲಿ ಟಾಸ್ ಗೆದ್ದ ಯುಎಇ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಇದನ್ನೂ ಓದಿ: Sad: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಪುತ್ತೂರಿನ ಯುವಕ ಸಾವು
ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ತಂಡದ ಪರ ನಾಯಕ ಮುಹಮ್ಮದ್ ವಸೀಮ್ ಅಜೇಯ 66, ಅಲಿಶಾನ್ ಶರಫು 55, ಮಯಾಂಕ್ ಕುಮಾರ್ 21 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ 2, ಜಾಕೊಬ್ ಡಫಿ, ಲೋಕಿ ಫರ್ಗಿಸನ್, ಮಿಚಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೆ 15.2 ಓವರ್ಗಳಲ್ಲಿ ಗುರಿ ತಲುಪಿತು. ಆರಂಭಿಕರಾದ ಟಿಮ್ ಸೈಫರ್ಟ್ 42 ಎಸೆತಗಳಲ್ಲಿ 89, ಫಿನ್ ಅಲೆನ್ 50 ಎಸೆತಗಳಲ್ಲಿ 84 ರನ್ ಗಳಿಸಿದರು.
ಇವರಿಬ್ಬರ ನಡುವಿನ 175 ರನ್ಗಳ ಜೊತಟಯಾಟ ಟಿ- 20 ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ವಿಕೆಟ್ಗೆ ಅತಿ ದೊಡ್ಡ ಜೊತೆಯಾಟವಾಗಿ ದಾಖಲಾಯಿತು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

