ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನದ ನಡುವಿನ ಪಂದ್ಯದಲ್ಲಿ ಸತತ ಎರಡು ಸೂಪರ್ ಓವರ್‌ಗಳ ನಂತರ ದಕ್ಷಿಣ ಆಫ್ರಿಕಾ ರೋಚಕ ಗೆಲುವು ಸಾಧಿಸಿತು.
ಮೊದಲಿಗೆ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ ಬೌಲರ್‌ಗಳನ್ನು ದಂಡಿಸಿದ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು.

ರಾಯನ್ ರಿಕೆಲ್ಟನ್ 28 ಎಸೆತಗಳಲ್ಲಿ 61, ಕ್ವಿಂಟನ್ ಡಿ ಕಾಕ್ 59, ಡಿವಲ್ಡ್ ಬ್ರೆವಿಸ್ 23, ದೇವಿಡ್ ಮಿಲ್ಲರ್ 20, ಮ್ಯಾಕ್ರೋ ಯಾನ್ಸನ್ 16 ರನ್ ಗಳಿಸಿದರು. ಅಪ್ಘನ್ ಪರ ಅಮ್ಜತುಲ್ಲಾ ಒಮರ್‌ಝೈ 3, ರಶೀದ್ ಖಾನ್ 2, ಫಜಲ್ ಫರೂಕಿ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ಬೆನ್ನಲ್ಲೇ ವಿಜಯ್ ದೇವರಕೊಂಡ ಹಳೆಯ ಗೆಳತಿಯ ಜೊತೆಗಿನ ಫೋಟೋ ವೈರಲ್
ಗುರಿ ಬೆನ್ನತ್ತಿದ ಅಫ್ಘಾನಿಸ್ತಾನಕ್ಕೆ ಆರಂಭಿಕ ಆಟಗಾರ ರಹಮನ್ನುಲ್ಲಾ ಗುರ್ಬಾಜ್ ಉತ್ತಮ ಆರಂಭ ಒದಗಿಸಿದರು. 42 ಎಸೆತಗಳಲ್ಲಿ 84 ರನ್ ಗಳಿಸಿದರು. ಅಮ್ಜತುಲ್ಲಾ ಒಮರ್‌ಝೈ 22, ರಶೀದ್ ಖಾನ್ 20 ದ್ವಾರಿಶ್ ರಸೂಲಿ 15 ರನ್ ಗಳಿಸಿ ತಂಡಕ್ಕೆ ಆಧಾರವಾದರು. ದಕ್ಷಿಣ ಆಫ್ರಿಕಾ ಪರ ಲುಂಗಿ ಎಂಗಿಡಿ 3, ಮ್ಯಾಕ್ರೊ ಯಾನ್ಸನ್, ಕಾಗಿಸೊ ರಬಾಡ, ಕೇಶವ್ ಮಹಾರಾಜ್ ಮತ್ತು ಜಾರ್ಜ್ ಲಿಂಡೆ ತಲಾ ಒಂದು ವಿಕೆಟ್ ಪಡೆದರು.
ಸೂಪರ್ ಓವರ್
ಅಫ್ಘಾನಿಸ್ತಾನಕ್ಕೆ ಉತ್ತಮ ಆರಂಭ ದೊರೆತರೂ ಕೂಡ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಗೆಲುವಿಗೆ ಪರದಾಟ ನಡೆಸಿತು. ಗೆಲ್ಲಲು ಕೊನೆಯ ಓವರ್‌ನಲ್ಲಿ 12 ರನ್ ಬೇಕಿತ್ತು. ಮೊದಲ ಎಸೆತದಲ್ಲಿ ನೂರ್ ಅಹಮ್ಮದ್ ಕ್ಯಾಚ್ ನೀಡಿದರೂ ಕೂಡ ನೋ ಬಾಲ್ ಆದ ಕಾರಣ ಜೀವದಾನ ದೊರೆಯಿತು. ಅದರ ಸದುಪಯೋಗ ಪಡಿಸಿಕೊಂಡ ಅಪ್ಘನ್ ಬ್ಯಾಟರ್ ಸಿಕ್ಸರ್ ಗಳಿಸಿ ಗೆಲುವಿನ ಆಸೆ ಮೂಡಿಸಿದರು. ಆದರೆ 4ನೇ ಎಸೆತದಲ್ಲಿ ರನೌಟ್ ಆಗುವ ಮೂಲಕ ಪಂದ್ಯ ಟೈ ಆಯಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 17 ರನ್ ಗಳಿಸಿತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 17 ರನ್ ಗಳಿಸಿ ಪುನಃ ಟೈ ಮಾಡಿಕೊಂಡಿತು. ಎರಡನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 23 ರನ್ ಗಳಿಸಿತು. ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ಗೆಲುವಿನ ಸಮೀಪ ಬಂದು ವೀರೋಚಿತ ಸೋಲು ಕಂಡಿತು. ಸತತ 3 ಸಿಕ್ಸರ್ ಗಳಿಸಿ ಗುರ್ಬಾಜ್ ಗೆಲುವಿನ ಆಸೆ ಮೂಡಿಸಿ ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ರೋಚಕ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

