ಮಧುಮೇಹಿಗಳ (Diabetes) ಮೂತ್ರವನ್ನು ಬಳಸಿಕೊಂಡು ವಿಸ್ಕಿ ತಯಾರಿಸುವ ವಿಶಿಷ್ಟ ಮತ್ತು ವಿಚಿತ್ರ ಪ್ರಯೋಗವೊಂದು ನಡೆದಿದೆ. ಜೇಮ್ಸ್ ಗಿಲ್ಪಿನ್ ಎಂಬುವವರು ಈ ಪ್ರಯೋಗವನ್ನು ನಡೆಸಿದ್ದಾರೆ. ಇವರು ಸ್ವತಃ ಟೈಪ್ 1 ಡಯಾಬಿಟಿಸ್‌ನಿಂದ ಬಳಲುತ್ತಿದ್ದಾರೆ. ತ್ಯಾಜ್ಯ ಎಂದು ನಾವು ಯಾವುದನ್ನು ಪರಿಗಣಿಸುತ್ತೇವೆಯೋ ಅದನ್ನು ಸಂಪನ್ಮೂಲವಾಗಿ (Waste to Wealth) ಹೇಗೆ ಬಳಸಬಹುದು ಎಂದು ತೋರಿಸುವುದು ಇವರ ಉದ್ದೇಶವಾಗಿತ್ತು.
ಸಾಮಾನ್ಯವಾಗಿ ಟೈಪ್ 2 ಡಯಾಬಿಟಿಸ್ ಇರುವವರ ದೇಹದಲ್ಲಿ ರಕ್ತದ ಸಕ್ಕರೆ ಮಟ್ಟವು ಹೆಚ್ಚಾದಾಗ, ಆ ಸಕ್ಕರೆಯು (Glucose) ಮೂತ್ರದ ಮೂಲಕ ಹೊರಹೋಗುತ್ತದೆ. ಗಿಲ್ಪಿನ್ ಅವರು ಮೊದಲು ಈ ಮೂತ್ರವನ್ನು ಸಂಗ್ರಹಿಸಿ, ನೀರು ಶುದ್ಧೀಕರಿಸುವ ಮಾದರಿಯಲ್ಲಿ ಫಿಲ್ಟರ್ ಮಾಡಿದರು.ನಂತರ ಅದರಲ್ಲಿರುವ ಸಕ್ಕರೆಯ ಅಣುಗಳನ್ನು ಬೇರ್ಪಡಿಸಿ ಶುದ್ಧೀಕರಿಸಿದರು. ಈ ಸಕ್ಕರೆಯನ್ನು ‘ಮ್ಯಾಶ್ ಸ್ಟಾಕ್’ ಜೊತೆ ಸೇರಿಸಿ ಹುದುಗುವಿಕೆಗೆ (Fermentation) ಒಳಪಡಿಸಿದಾಗ ಅದು ಆಲ್ಕೋಹಾಲ್ ಆಗಿ ಪರಿವರ್ತನೆಯಾಯಿತು.

ಇದನ್ನೂ ಓದಿ : Phycology : ಪದೇ ಪದೇ ಸಿಟ್ಟು ಬರುತ್ತಿದೆಯೇ? ಈ ಸಮಸ್ಯೆಗೆ ಕಾರಣ ಇಲ್ಲಿದೆ
ಹೀಗೆ ತಯಾರಾದ ಮದ್ಯಕ್ಕೆ ಸಾಂಪ್ರದಾಯಿಕ ವಿಸ್ಕಿ ಮಿಶ್ರಣಗಳನ್ನು ಸೇರಿಸಿ ಬಣ್ಣ ಮತ್ತು ರುಚಿಯನ್ನು ನೀಡಲಾಯಿತು. ವಿಶೇಷವೆಂದರೆ, ಪ್ರತಿಯೊಂದು ಬಾಟಲಿಯ ಮೇಲೆ ಆ ಸಕ್ಕರೆಯನ್ನು ನೀಡಿದ ವ್ಯಕ್ತಿಯ (Donor) ಹೆಸರು ಮತ್ತು ವಯಸ್ಸನ್ನು ಲೇಬಲ್ ಮಾಡಲಾಗಿತ್ತು. ಗಿಲ್ಪಿನ್ ಅವರು ತಮ್ಮ ಸ್ವಂತ ಅಜ್ಜಿಯವರ ಮೂತ್ರದಿಂದಲೇ ಈ ಪ್ರಯೋಗವನ್ನು ಮೊದಲು ಆರಂಭಿಸಿದ್ದರು.ಈ ವಿಸ್ಕಿ ಸಾರ್ವಜನಿಕವಾಗಿ ಮಾರಾಟಕ್ಕೆ ಲಭ್ಯವಿಲ್ಲ. ಇದು ಕೇವಲ ಒಂದು ಸಂಶೋಧನಾತ್ಮಕ ಅಥವಾ ಕಲಾತ್ಮಕ ಯೋಜನೆಯಾಗಿತ್ತು. ಅಲ್ಲದೆ, ಮಧುಮೇಹಿಗಳು ಮದ್ಯ ಸೇವಿಸುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.
ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

