Breaking News

T20 Worldcup: ಟೂರ್ನಮೆಂಟ್‌ನ ಎರಡನೇ ಜಯ ದಾಖಲಿಸಿದ ಶ್ರೀಲಂಕಾ

ಪಲ್ಲೆಕೆಲೆ: ಅತಿಥೇಯ ಶ್ರೀಲಂಕಾ ಮತ್ತು ಓಮನ್ ತಂಡಗಳ ನಡುವೆ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 105 ರನ್‌ಗಳ ಭರ್ಜರಿ ಜಯ ಗಳಿಸಿದೆ.

ಇಲ್ಲಿನ ಪಲ್ಲಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಓಮನ್ ತಂಡ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತು.

Advertisement

ಇದನ್ನೂ ಓದಿ: ಮಧುಮೇಹಿಗಳ ಮೂತ್ರವನ್ನು ಬಳಸಿಕೊಂಡು ವಿಸ್ಕಿ ತಯಾರಿಸಿದ ತಜ್ಞ

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪರ ಕುಸಾಲ್ ಮೆಂಡಿಸ್ 61, ಪವನ್ ರತ್ನನಾಯಕೆ 60 ಮತ್ತು ದಾಸನ್ ಶಣಕ 50 ಅರ್ಧಶತಕ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಿಸಲು ಸಹಕರಿಸಿದರು. ಓಮನ್ ಪರ ಜಿತೆನ್ ರಮನಂದಿ 2, ಸುಫಿಯಾನ್ ಮೆಹಮೂದ್, ಜಯ್ ಒಡೆದ್ರ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಓಮನ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡ 120 ರನ್ ಗಳಿಸಿ 105 ರನ್‌ಗಳ ಅಂತರದಿಂದ ಸೋಲನ್ನನುಭವಿಸಿತು. ತಂಡದ ಪರ ಮೊದಮ್ಮದ್ ನದೀಮ್ ಅಜೇಯ 53, ವಸೀಮ್ ಅಲಿ 27 ರನ್ ಗಳಿಸಿದರು. ಶ್ರೀಲಂಕಾ ಪರ ದುಶ್ಯಂತ ಚಮೀರ ಮತ್ತು ಮಹೇಶ್ ತೀಕ್ಷಣ ತಲಾ 2 ವಿಕೆಟ್, ಧುನಿತ್ ವೆಲ್ಲಲಗೆ, ದುಶಾನ್ ಹೆಮಂತ ಮತ್ತು ಕಮಿಂಡು ಮೆಂಡಿಸ್ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು