Breaking News

ಐರ್ಲೆಂಡ್ ತಂಡದ ನಾಯಕ ಪಾಲ್ ಸ್ಟರ್ಲಿಂಗ್ ವಿಶ್ವಕಪ್ ಇಂದ ಔಟ್

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಐರ್‌ಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಪೌಲ್ ಸ್ಟಿರ್ಲಿಂಗ್‌ ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

ಐರ್‌ಲ್ಯಾಂಡ್‌ ತಂಡಕ್ಕೆ ಸ್ಟಿರ್ಲಿಂಗ್ ಬದಲಿಗೆ ಸ್ಯಾಮ್ ಟೋಪ್ಪಿಂಗ್‌ರನ್ನು ಸೇರ್ಪಡೆಗೊಳಿಸಲು 2026ರ ಅವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯ ಈವೆಂಟ್ ಟೆಕ್ನಿಕಲ್ ಕಮಿಟಿ ಶುಕ್ರವಾರ ಅನುಮೋದನೆ ನೀಡಿದೆ.

Advertisement

ಇದನ್ನೂ ಓದಿ: T20 World cup: ನೆದರ್ಲೆಂಡ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಯುಎಸ್ಎ

ಆಸ್ಟ್ರೇಲಿಯ ತಂಡದ ವಿರುದ್ಧ ಬುಧವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಸ್ಪಿರ್ಲಿಂಗ್‌ ಮೊಣಕಾಲು ನೋವಿಗೆ ಒಳಗಾಗಿದ್ದರು. ಅದೇ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಕ್ಷಿಪ್ರವಾಗಿ ಒಂದು ರನ್ ಗಳಿಸಲು ಹೋದಾಗ ನೋವು ಹೆಚ್ಚಾಗಿದೆ.

ಬದಲಿ ಆಟಗಾರ ಟೋಪ್ಪಿಂಗ್ 15 ಸದಸ್ಯರನ್ನು ಒಳಗೊಂಡ ಐರ್‌ಲ್ಯಾಂಡ್‌ ತಂಡವನ್ನು ಶೀಘ್ರವೇ ಸೇರಲಿದ್ದಾರೆ. 20ರ ಹರೆಯದ ಎಡಗೈ ಆರಂಭಿಕ ಬ್ಯಾಟರ್ ಕಳೆದ ವರ್ಷ ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ‘ಎ’ ವಿರುದ್ಧ ನಡೆದ ಚತುರ್ದಿನ ಪಂದ್ಯದಲ್ಲಿ ಐರ್‌ಲ್ಯಾಂಡ್ ‘ಎ’ ಪರವಾಗಿ ಆಡಿದ್ದರು.

ಐರ್‌ಲ್ಯಾಂಡ್‌ ತಂಡವು ಶನಿವಾರ ಕೊಲಂಬೊದಲ್ಲಿ ಒಮಾನ್ ತಂಡದ ವಿರುದ್ಧ ಸೆಣಸಾಡಲಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು