ವಿಶ್ವದಲ್ಲಿ ಹಿಂದೂ ಧರ್ಮವನ್ನು ಪಾಲಿಸುವ ಜನಸಂಖ್ಯೆ ಹೆಚ್ಚಾಗಿ ದಕ್ಷಿಣ ಏಷ್ಯಾದ ದೇಶಗಳಲ್ಲಿ ಕಂಡುಬರುತ್ತದೆ. ಇತ್ತೀಚಿನ ಅಂದಾಜುಗಳ ಪ್ರಕಾರ, ಹಿಂದೂಗಳ ಸಂಖ್ಯೆ ಹೆಚ್ಚು ಇರುವ ಟಾಪ್ 6 ದೇಶಗಳ ಬಗ್ಗೆ ಹೇಳಲಾಗಿದೆ. ಇದರಲ್ಲಿ ವಿಶೇಷವೆಂದರೆ ಪಾಕಿಸ್ತಾನವು ವಿಶ್ವದ ಅತಿ ಹೆಚ್ಚು ಹಿಂದೂ ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಅಲ್ಲಿನ ಒಟ್ಟು ಹಿಂದೂ ಜನಸಂಖ್ಯೆಯ ಬಹುತೇಕ ಮಂದಿ ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ. ಜನಸಂಖ್ಯೆ ಹೆಚ್ಚಿದ್ದರೂ ಸಹ, ಅಲ್ಲಿನ ಹಿಂದೂಗಳು ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಗಳು ತಿಳಿಸುತ್ತವೆ.
ಭಾರತ 110 ಕೋಟಿಗೂ ಅಧಿಕ ಹಿಂದೂ ಜನಸಂಖ್ಯೆಯನ್ನು ಹೊಂದಿದೆ, ವಿಶ್ವದ ಶೇ. 94ರಷ್ಟು ಹಿಂದೂಗಳು ಭಾರತದಲ್ಲೇ ಇದ್ದಾರೆ. ನೇಪಾಳ 2.8 ಕೋಟಿ ಹಿಂದೂಗಳನ್ನು ಹೊಂದಿದೆ. ಶೇಕಡಾವಾರು ಆಧಾರದಲ್ಲಿ ಅತಿ ಹೆಚ್ಚು ಹಿಂದೂಗಳಿರುವ ದೇಶ (ಶೇ. 81). ಬಾಂಗ್ಲಾದೇಶದಲ್ಲಿ 1.4 ಕೋಟಿ ಜನರು ಹಿಂದೂಗಳನ್ನು ಹೊಂದಿದೆ. ಇಲ್ಲಿ ಹಿಂದೂ ಧರ್ಮವು ಎರಡನೇ ಅತಿದೊಡ್ಡ ಧರ್ಮವಾಗಿದೆ. ಇಂಡೋನೇಷ್ಯಾದಲ್ಲಿ 40ರಿಂದ 50 ಲಕ್ಷ ಹಿಂದೂಗಳು ಇದ್ದಾರೆ. ಇಲ್ಲಿನ ಬಾಲಿ ದ್ವೀಪವು ಹಿಂದೂ ಸಂಸ್ಕೃತಿಯ ಪ್ರಮುಖ ಕೇಂದ್ರ. ಪಾಕಿಸ್ತಾನದಲ್ಲಿ 40ರಿಂದ 44 ಲಕ್ಷ ಹಿಂದೂಗಳು ಇದ್ದರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಹಿಂದೂಗಳಿದ್ದಾರೆ. ಶ್ರೀಲಂಕಾ 30ರಿಂದ 31 ಲಕ್ಷಕ್ಕೂ ಹೆಚ್ಚು ಹಿಂದೂಗಳನ್ನು ಹೊಂದಿದೆ, ಇಲ್ಲಿ ತಮಿಳು ಮೂಲದ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಒಕ್ಕಲಿಗ ಯುವ ಬ್ರಿಗೇಡ್‌ನ ‘ಸಾವಯವ ಸಂತೆ’ ಸಮಾರೋಪ; ಶ್ರೀಗಳ ಸಾಧನೆಗೆ ನಿವೃತ್ತ ನ್ಯಾ. ಸಂತೋಷ ಹೆಗ್ಡೆ ಮೆಚ್ಚುಗೆ
ಪಾಕಿಸ್ತಾನದಲ್ಲಿ ಹಿಂದೂ ಸಮುದಾಯವು ಅತಿ ದೊಡ್ಡ ಅಲ್ಪಸಂಖ್ಯಾತ ಗುಂಪಾಗಿದೆ. ಅಲ್ಲಿನ ಒಟ್ಟು ಹಿಂದೂ ಜನಸಂಖ್ಯೆಯ ಬಹುತೇಕ ಮಂದಿ ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ. ಜನಸಂಖ್ಯೆ ಹೆಚ್ಚಿದ್ದರೂ ಸಹ, ಅಲ್ಲಿನ ಹಿಂದೂಗಳು ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಗಳು ತಿಳಿಸುತ್ತವೆ. ನಂತರದ ಸ್ಥಾನಗಳಲ್ಲಿ ಅಮೆರಿಕ (USA), ಮಲೇಷ್ಯಾ ಮತ್ತು ಯುನೈಟೆಡ್ ಕಿಂಗ್‌ಡಮ್ (UK) ದೇಶಗಳು ಬರುತ್ತವೆ. ಅಮೆರಿಕದಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಹಿಂದೂಗಳಿದ್ದಾರೆ ಎಂದು ಅಂದಾಜಿಸಲಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

