Breaking News

Education: ಮುಂದಿನ ಸಾಲಿನ ಆರ್‌ಟಿಇ ಪ್ರವೇಶ ಆರಂಭ

ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿನ ಆರ್‌ಟಿಇ ಅರ್ಜಿ ಪ್ರಕ್ರಿಯೆ ಈಗ ಅಧಿಕೃತವಾಗಿ ಆರಂಭವಾಗಿದೆ. ಇದರಡಿ ಆರ್ಥಿಕವಾಗಿ ಹಿಂದುಳಿದ ಮತ್ತು ಸಾಮಾಜಿಕವಾಗಿ ದುರ್ಬಲ ಕುಟುಂಬಗಳ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಪಡೆಯುವ ಅವಕಾಶ ನೀಡಲಾಗುತ್ತದೆ. ಖಾಸಗಿ ಶಾಲೆಗಳಲ್ಲಿನ 25% ಸೀಟುಗಳು ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗಾಗಿ ಮೀಸಲಾಗಿವೆ.

RTE ಎಂದರೇನು?

Advertisement

RTE ಎಂದರೆ ಶಿಕ್ಷಣ ಹಕ್ಕು ಕಾಯ್ದೆ. ಕಾಯ್ದೆಯ ಪ್ರಕಾರ, 6-14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ದೊರಕಬೇಕು. 25% ಸೀಟುಗಳ ಮೀಸಲಾತಿ ಪ್ರಾಥಮಿಕ ಶಿಕ್ಷಣದ ಸಮಾನಾವಕಾಶವನ್ನು ಹೆಚ್ಚಿಸಲು ರೂಪಿಸಲಾಗಿದೆ.

ಇದನ್ನೂ ಓದಿ: T20 Worldcup: ಪಾಕಿಸ್ತಾನವನ್ನ ಮಣಿಸಿ ಸೆಮಿಫೈನಲ್ಸ್‌ಗೆ ಏರಿದ ಇಂಗ್ಲೆಂಡ್

ಅರ್ಜಿ ಸಲ್ಲಿಸಲು ಅರ್ಹತೆ:

‘ಅರ್ಜಿದಾರ/ಮಗು ಕರ್ನಾಟಕದ ನಿವಾಸಿಯಾಗಿರಬೇಕು.

ನರ್ಸರಿ /ಎಲ್‌ಕೆಜಿ ಪ್ರವೇಶಕ್ಕೆ ಮಗುವಿನ ವಯಸ್ಸು 3-5 ವರ್ಷಗಳವರೆಗೆ ಇರಬೇಕು.

1ನೇ ತರಗತಿ ಪ್ರವೇಶಕ್ಕೆ ವಯಸ್ಸು 5-7 ವರ್ಷಗಳಿರಬೇಕು.

ಪೋಷಕರ ವಾರ್ಷಿಕ ಆದಾಯ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು.

ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಮೊದಲ ಆದ್ಯತೆ.

ಅಗತ್ಯ ದಾಖಲೆಗಳು:

RTE ಅರ್ಜಿ ವೇಳೆ ಈ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಬೇಕು:

ಮಗು ಮತ್ತು ಪೋಷಕರ ಆಧಾರ್ ಕಾರ್ಡ್

* ಜನನ ಪ್ರಮಾಣ ಪತ್ರ

* ಜಾತಿ ಮತ್ತು ಆದಾಯ ಪ್ರಮಾಣಪತ್ರ

* ವಾಸಸ್ಥಳ ಪ್ರಮಾಣ ಪತ್ರ

* ರೇಶನ್ ಕಾರ್ಡ

ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

RTE ಅರ್ಜಿ ಲಿಂಕ್‌ಗೆ ಕ್ಲಿಕ್ ಮಾಡಿ.

ವಿದ್ಯಾರ್ಥಿ ಮತ್ತು ಪೋಷಕರ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಪ್ರಾರಂಭ – 24 ಫೆಬ್ರುವರಿ 2026

ಅರ್ಜಿ ಕೊನೆ ದಿನಾಂಕ – 24 ಮಾರ್ಚ್ 2026

ಫಲಿತಾಂಶ – 27 ಮಾರ್ಚ್ 2026

ಪ್ರವೇಶ ಪ್ರಕ್ರಿಯೆ – ಏಪ್ರಿಲ್ ತಿಂಗಳಿನಲ್ಲಿ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು