Breaking News

ಪುತ್ತೂರು: ಶಾಸಕ ಅಶೋಕ್ ರೈ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಆಕ್ರೋಶ; ‘ಮನೆ ಮುತ್ತಿಗೆ’ ಹಾಕುವ ಎಚ್ಚರಿಕೆ!

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಮಹಿಳೆಯರ ಬಗ್ಗೆ ಅಥವಾ ಮಹಿಳಾ ಕಾರ್ಯಕರ್ತರ ಬಗ್ಗೆ ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಖಂಡಿಸಿ ಪುತ್ತೂರು ಬಿಜೆಪಿ ಮಹಿಳಾ ಮೋರ್ಚಾದಿಂದ ಬೃಹತ್ ಪ್ರತಿಭಟನೆ ನಡೆಯಿತು. ಶಾಸಕರ ನಡವಳಿಕೆಯು ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಪ್ರತಿಭಟನಾಕಾರರು ಕಿಡಿಗಾಡಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳಾ ಮೋರ್ಚಾದ ನಾಯಕಿಯರು ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಜನಪ್ರತಿನಿಧಿಯಾಗಿ ಮಹಿಳೆಯರಿಗೆ ಗೌರವ ನೀಡದ ಶಾಸಕರ ಧೋರಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಇದು ಕೇವಲ ಆರಂಭವಷ್ಟೇ. ಶಾಸಕರು ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳದಿದ್ದರೆ ಮತ್ತು ಇನ್ನೊಂದು ಬಾರಿ ಇದೇ ರೀತಿ ವರ್ತಿಸಿದರೆ, ಜಿಲ್ಲೆಯ ಎಲ್ಲಾ ಮಹಿಳೆಯರು ಒಗ್ಗೂಡಿ ಶಾಸಕರ ನಿವಾಸ ಹಾಗೂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮತ್ತು ಮುತ್ತಿಗೆ ಹಾಕಲಾಗುವುದು” ಎಂದು ಎಚ್ಚರಿಕೆ ನೀಡಿದರು. ಈ ಹೋರಾಟವನ್ನು ಕೇವಲ ಪುತ್ತೂರಿಗೆ ಸೀಮಿತಗೊಳಿಸದೆ ಜಿಲ್ಲಾದ್ಯಂತ ವಿಸ್ತರಿಸುವ ಎಚ್ಚರಿಕೆಯನ್ನು ಬಿಜೆಪಿ ಮಹಿಳಾ ಘಟಕ ನೀಡಿದೆ.

Advertisement

ಇದನ್ನೂ ಓದಿ: ಬಾಕಿ ಆನೆ ಕಾರ್ಯಪಡೆ ಶೀಘ್ರ ರಚನೆ ಕೋರಿ ಸಿಎಂಗೆ ಶಾಸಕಿ ಭಾಗೀರಥಿ ಮುರುಳ್ಯ ಪತ್ರ

ಮಹಿಳೆಯರ ಘನತೆಗೆ ಕುಂದು ತರುವಂತಹ ಹೇಳಿಕೆಗಳನ್ನು ಶಾಸಕರು ಹಿಂಪಡೆಯಬೇಕು ಮತ್ತು ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು