Breaking News

ಅಲೆನ್ ಮಿಂಚಿನ ಶತಕ; ದ.ಆಫ್ರಿಕಾ ಮಣಿಸಿ ಫೈನಲ್ ಪ್ರವೇಶಿಸಿದ ಕಿವೀಸ್

ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, 20 ಓವರ್‌ಗಳಲ್ಲಿ 8  ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತು. ತಂಡದ ಪರ ಮಾರ್ಕೊ ಜಾನ್ಸೆನ್ 55 (ಅಜೇಯ), ಡೆವಾಲ್ಡ್ ಬ್ರೆವಿಸ್ 34, ಐಡೆನ್ ಮಾರ್ಕ್ರಮ್ ೧೮, ಕ್ವಿಂಟನ್ ಡಿ ಕಾಕ್ 10, ಡೇವಿಡ್ ಮಿಲ್ಲರ್ 6, ಟ್ರಿಸ್ಟಾನ್ ಸ್ಟಬ್ಸ್ 29, ಕಾರ್ಬಿನ್ ಬಾಷ್ 2, ಕೇಶವ ಮಹಾರಾಜ್ 1(ಅಜೇಯ) ರನ್ ಗಳಿಸಿದರು. ರಿಗಿಸೊ ರಬಡಾ, ರಯಾನ್ ರಿಕೆಲ್ಟನ್ ಶೂನ್ಯ ಸುತ್ತಿದರು. ಕಿವೀಸ್ ಬೌಲರ್‌ಗಳಾದ ರಚಿನ್ ರವೀಂದ್ರ, ಕೋಲ್ ಮೆಕ್‌ಕೊಂಚಿ, ಮ್ಯಾಟ್ ಹೆನ್ರಿ ತಲಾ 2 ವಿಕೆಟ್, ಜೇಮ್ಸ್ ನೀಶಮ್, ಲಾಕಿ ಫರ್ಗುಸನ್ ತಲಾ 1 ವಿಕೆಟ್ ಕಬಳಿಸಿದರು.

170 ರನ್‌ಗಳ ಗುರಿ ಬೆನ್ನತ್ತಿದ ಕಿವೀಸ್, 12.5 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 173 ರನ್ ಬಾರಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ತಂಡದ ಪರ ಫಿನ್ ಅಲೆನ್ ಭರ್ಜರಿ ಶತಕ ಸಿಡಿಸಿದ್ದಾರೆ. ಕೇವಲ 33 ಎಸೆತಗಳಲ್ಲಿ 8 ಸಿಕ್ಸ್, 10 ಬೌಂಡರಿಗಳನ್ನು ಸಿಡಿಸಿ ಅಜೇಯ 100 ರನ್‌ಗಳನ್ನು ಗಳಿಸಿದರು. ಅಲ್ಲದೆ, ಟಿಮ್ ಸೀಫರ್ಟ್ 28, ರಾಚಿನ್ ರವೀಂದ್ರ 12 ರನ್ ಬಾರಿಸಿದರು.

Advertisement

ಇದನ್ನೂ ಓದಿ: ಟಿ20 ವಿಶ್ವಕಪ್ 2026ರಲ್ಲಿ ದಾಖಲೆ ಬರೆದ ಭಾರತ; 500 ಮಿಲಿಯನ್ ದಾಟಿದ ವೀಕ್ಷಕರ ಸಂಖ್ಯೆ!

ದಕ್ಷಿಣ ಆಫ್ರಿಕಾ ಬೌಲರ್‌ಗಳಾದ ಕಗಿಸೊ ರಬಾಡ 1 ವಿಕೆಟ್ ಪಡೆದರು. ನಾಳೆ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಕಿವೀಸ್ ತಂಡದೊಂದಿಗೆ ಟಿ20 ವಿಶ್ವಕಪ್‌ಗಾಗಿ ಸೆಣಸಾಡಲಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು