Breaking News

Viral Video: ಬಣ್ಣ ಎರಚಿದ ಪುಟ್ಟ ಬಾಲಕನ ಮೇಲೆ ಬಿಸಿಬಿಸಿ ನೀರು ಸುರಿದ ಅಜ್ಜಿ! ಬಾಲಕನ ನರಳಾಟ

ಹೋಳಿ ಹಬ್ಬ ಬಂತೆಂದರೆ ಸಾಕು ಯುವಕರಿಗೆ, ಅದರಲ್ಲೂ ಮಕ್ಕಳಿಗಂತೂ ಎಲ್ಲಿಲ್ಲದ ಸಂಭ್ರಮ. ಮನೆಯವರಿಗೆ, ಸಂಬಂಧಿಕರಿಗೆ, ನೆರೆಹೊರೆಯವರಿಗೆ ಬಣ್ಣ ಎರಚಿ ಸಂಭ್ರಮಿಸುತ್ತಾರೆ. ಹೀಗೆ ಸಂಭ್ರಮದಲ್ಲಿದ್ದ ಪುಟ್ಟ ಬಾಲಕನೊಬ್ಬ ಬಣ್ಣ ಎರಚಿದನೆಂದು ಅಜ್ಜಿ ಬಿಸಿಬಿಸಿ ನೀರನ್ನು ಆತನ ಮೇಲೆ ಸುರಿದ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು, ಬಾಲಕನ ನರಳಾಟದ ದೃಶ್ಯ ಕರುಳು ಚುರ್ ಎನ್ನುವಂತಿದೆ.

ಹೌದು, ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕೋರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೋಳಿ ಹಬ್ಬದ ದಿನವಾದ ಮಾ.೩ ರಂದು ಈ ಘಟನೆ ನಡೆದಿದೆ. ಓಂ ಹರೀಶ್ ವಂಗೆ ಎಂಬ ನಾಲ್ಕು ವರ್ಷದ ಬಾಲಕ ಮನೆಯ ಹೊರಗೆ ಬಣ್ಣದ ಸ್ಪ್ರೆ ಬಾಟಲಿಯೊಂದಿಗೆ ಆಟವಾಡುತ್ತಿದ್ದನು.

Advertisement

ಈ ವೇಳೆ ಆಕಸ್ಮಿಕವಾಗಿ ಬಣ್ಣದ ನೀರು ಅಜ್ಜಿ ಸಿಂಧು ಠಾಕ್ರೆಗೆ ಎರಚಲು ಮುಂದಾಗಿದ್ದಾನೆ. ಇದರಿಂದ ಆಕ್ರೋಶಗೊಂಡ ಅಜ್ಜಿ, ಬಕೆಟ್‌ನಲ್ಲಿ ತುಂಬಿದ್ದ ಬಿಸಿಬಿಸಿ ನೀರನ್ನು ಬಾಲಕನ ಮೇಲೆಯೇ ಸುರಿದು ವಿಕೃತಿ ಮೆರೆದಿದ್ದಾರೆ. ಬಿಸಿ ನೀರು ದೇಹದ ಮೇಲೆ ಬಿದ್ದ ತಕ್ಷಣ ಬಾಲಕ ನೋವಿನಿಂದ ಕಿರುಚುತ್ತಾ ನರಳಾಡಿದ ದೃಶ್ಯ ಮನಕಲುಕುವಂತಿದೆ.

ಬಿಸಿನೀರು ಸುರಿದ ಪರಿಣಾಮ ಬಾಲಕನ ಸೊಂಟದ ಕೆಳಭಾಗದ ಚರ್ಮ ಸುಟ್ಟುಹೋಗಿದ್ದು, ಶೇ.೪೫ ರಷ್ಟು ಸುಟ್ಟ ಗಾಯಗಳಾಗಿವೆ. ಗಾಯಗೊಂಡ ಬಾಲಕನನ್ನು ತಕ್ಷಣ ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಘಟನೆಯ ದೃಶ್ಯ ಮನೆಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಮಾನವೀಯ ಕೃತ್ಯದ ಬಗ್ಗೆ ಕೋರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವೃದ್ಧೆಯ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆಕೆಯ ಕೃತ್ಯವನ್ನೂ ಸಾರ್ವಜನಿಕರು, ನೆಟ್ಟಿಗರು ಖಂಡಿಸಿ ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು