ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 7 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದು, ನ್ಯೂಜಿಲ್ಯಾಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ವಿಶ್ವಕಪ್‌ಗಾಗಿ ಸೆಣಸಾಡಲಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ, 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ೨೫೩ ರನ್ ಬಾರಿಸಿದರು. ಆಂಗ್ಲರ ವಿರುದ್ಧ ಅಬ್ಬರಿಸಿದ ಭಾರತದ ಬ್ಯಾಟರ್ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಸಿಡಿಸಿ 89 ರನ್ ಬಾರಿಸಿದರು. ಅಭಿಷೇಕ್ ಶರ್ಮಾ ಅವರು 9 ರನ್‌ಗಳಿಗೆ ಔಟ್ ಆಗುವ ಮೂಲಕ ಅಭಿಮಾನಿಗಳಲ್ಲಿ ಮತ್ತೆ ನಿರಾಸೆ ಮೂಡಿಸಿದರು.

ಇಶಾನ್ ಕಿಶನ್ 18 ಎಸೆತಗಳಲ್ಲಿ 39 ರನ್ ಬಾರಿಸಿದರೆ, ಶಿವಂ ದುಬೆ 43 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 11 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 27 ರನ್, ತಿಲಕ್ ವರ್ಮಾ 21, ಅಕ್ಷರ್ ಪಟೇಲ್ ಅಜೇಯ 2 ರನ್ ಗಳಿಸಿದರು.
ಇದನ್ನೂ ಓದಿ: IND vs ENG ಸೆಮಿ ಕಾದಾಟ: ಇಂಡಿಯಾ ಪರ ಅಭಿಮಾನಿಗಳನ್ನು ಸೈಲೆಂಟ್ ಮಾಡ್ತೇವೆ: ಸ್ಯಾಮ್ ಕರನ್
ಇಂಗ್ಲೆಂಡ್ ಬೌಲರ್‌ಗಳಾದ ವಿಲ್ ಜ್ಯಾಕ್ಸ್, ಆದಿಲ್ ರಶೀದ್ ತಲಾ 2, ಚೋಫ್ರಾ ಆರ್ಚರ್ 1 ವಿಕೆಟ್ ಪಡೆದರು.
೨೫೪ ರನ್‌ಗಳ ಗುರಿ ಬೆನ್ನತ್ತಿದ ಆಂಗ್ಲರ ಪಡೆ, 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 246ರನ್ ಗಳಿಸಿ ಸೋಲು ಅನುಭವಿಸಿತು. ತಂಡದ ಜಾಕೋಬ್ ಬೆಥೆಲ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು, 48ಎಸೆತಗಳಲ್ಲಿ 8ಬೌಂಡರಿ, 7 ಸಿಕ್ಸ್‌ಗಳನ್ನು ಸಿಡಿಸಿ 105 ರನ್ ಬಾರಿಸಿದರು. ಜೋಸ್ ಬಟ್ಲರ್ 25, ಟಾಮ್ ಬ್ಯಾಂಟನ್ 17, ಫಿಲ್ ಸಾಲ್ಟ್ 5, ಹ್ಯಾರಿ ಬ್ರೂಕ್ 7, ವಿಲ್ ಜ್ಯಾಕ್ಸ್ 35, ಸ್ಯಾಮ್ ಕರನ್ 18 ರನ್, ಜೇಮೀ ಓವರ್ಟನ್ 2, ಜೋಫ್ರಾ ಆರ್ಚರ್ 19 ರನ್ ಗಳಿಸಿದರು.
ಭಾರತದ ಬೌಲರ್‌ಗಳಾದ ಹಾರ್ದಿಕ್ ಪಾಂಡ್ಯ 2, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರ, ಅಕ್ಷರ್ ಪಟೇಲ್, ಅರ್ಶದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

