Breaking News

‘Dhurandhar 2’ trailer: ‘ಬೀಸ್ಟ್ ಮೋಡ್’ನಲ್ಲಿ ರಣವೀರ್ ಸಿಂಗ್; ಪಾಕಿಸ್ತಾನದ ಮೇಲೆ ಸೇಡಿಗೆ ಇಳಿದ ಹಮ್ಜಾ!

ಮುಂಬೈ: ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್ 2’ ಚಿತ್ರದ ಅಧಿಕೃತ ಟ್ರೇಲರ್ ಇಂದು ಬೆಳಿಗ್ಗೆ 11:01ಕ್ಕೆ ಬಿಡುಗಡೆಯಾಗಿದೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ನಂತರ ಸೀಕ್ವೆಲ್ ಮೇಲೆ ಭಾರಿ ನಿರೀಕ್ಷೆಗಳಿದ್ದು, ಟ್ರೇಲರ್‌ನಲ್ಲಿ ರಣವೀರ್ ಅವರ ರೌದ್ರಾವತಾರ ನೆಟ್ಟಿಗರನ್ನು ಬೆರಗುಗೊಳಿಸಿದೆ.

ಮೊದಲ ಭಾಗದಲ್ಲಿ ಕೇವಲ ‘ಹಮ್ಜಾ ಅಲಿ ಮಜಾರಿ’ ಎಂಬ ಗ್ಯಾಂಗ್‌ಸ್ಟರ್ ಆಗಿ ಕಂಡಿದ್ದ ರಣವೀರ್, ಈ ಭಾಗದಲ್ಲಿ ಭಾರತೀಯ ಸೀಕ್ರೆಟ್ ಏಜೆಂಟ್ ‘ಜಸ್ಕಿರತ್ ಸಿಂಗ್ ರಂಗಿ’ ಆಗಿ ಹೇಗೆ ರೂಪಾಂತರ ಹೊಂದುತ್ತಾರೆ ಎಂಬುದು ಟ್ರೇಲರ್‌ನ ಹೈಲೈಟ್.

Advertisement

ಪಾಕಿಸ್ತಾನದ ಲಿಯಾರಿ ಪಟ್ಟಣದಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿರುವ ಹಮ್ಜಾ, ಅಲ್ಲಿನ ಭಯೋತ್ಪಾದನಾ ಜಾಲವನ್ನು ಧ್ವಂಸಗೊಳಿಸಿ ‘ಮೇಜರ್ ಇಕ್ಬಾಲ್’ ಮತ್ತು ‘ಬಡೆ ಸಾಹಬ್’ ಎಂಬ ಮಾಸ್ಟರ್‌ಮೈಂಡ್‌ಗಳನ್ನು ಹತ್ಯೆ ಮಾಡುವ ಸಾಹಸಗಾಥೆ ಇಲ್ಲಿದೆ. ಚಿತ್ರದಲ್ಲಿ ಸಂಜಯ್ ದತ್ (ಶೆಟ್ಟಿ ಚೌಧರಿ ಅಸ್ಲಂ), ಅರ್ಜುನ್ ರಾಂಪಾಲ್ (ಮೇಜರ್ ಇಕ್ಬಾಲ್), ಆರ್. ಮಾಧವನ್ (ಅಜಯ್ ಸಾನ್ಯಾಲ್), ಸಾರಾ ಅರ್ಜುನ್ ಮತ್ತು ಅಕ್ಷಯ್ ಖನ್ನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: “ಭಾರತ ನನಗೆ ಒಂದು ರೀತಿಯಲ್ಲಿ ದ್ರೋಹ ಮಾಡಿದೆ”: ಇರಾನ್ ಮೂಲದ ನಟಿ ಮಂದಾನ ಕರಿಮಿ

ಚಿತ್ರದ ಟ್ರೇಲರ್‌ನಲ್ಲಿ ಹೈ-ವೋಲ್ಟೇಜ್ ಆ್ಯಕ್ಷನ್ ದೃಶ್ಯಗಳು, ಅಂತಾರಾಷ್ಟ್ರೀಯ ಮಟ್ಟದ ಸ್ಟಂಟ್ ಚಿತ್ರಿಕರಣ ಮತ್ತು ಹಿನ್ನೆಲೆ ಸಂಗೀತ ಗಮನಸೆಳೆಯುತ್ತಿದೆ.  ಚಿತ್ರವು ಮಾರ್ಚ್ 19, 2026 ರಂದು ಯುಗಾದಿ ಮತ್ತು ಈದ್ ಹಬ್ಬದ ಸಂಭ್ರಮದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು