ಮಂಗಳೂರು: ಗ್ಯಾಸ್ ಕೊಟ್ಟರೆ ಬಿರಿಯಾನಿ ಫ್ರೀ! ಸಿಲಿಂಡರ್ ಅಭಾವಕ್ಕೆ ಹೋಟೆಲ್ ಮಾಲೀಕನ ವಿಚಿತ್ರ ಆಫರ್

ಮಂಗಳೂರು: ರಾಜ್ಯದಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಎದುರಾಗಿದ್ದು, ಹೋಟೆಲ್ ಉದ್ಯಮದ ಮೇಲೆ ಭಾರಿ ಹೊಡೆತ ಬಿದ್ದಿದೆ. ಈ ಸಂಕಷ್ಟವನ್ನೇ ಅವಕಾಶವಾಗಿ ಬಳಸಿಕೊಂಡಿರುವ ಮಂಗಳೂರಿನ ಹೋಟೆಲ್‌ವೊಂದು ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಆದರೆ, ಈ ಆಫರ್ ಪಡೆಯಲು ಒಂದು ವಿಚಿತ್ರ ‘ಷರತ್ತು’ ವಿಧಿಸಲಾಗಿದೆ!

ಮಂಗಳೂರಿನ ಈ ಹೋಟೆಲ್ ತನ್ನ ಪ್ರವೇಶ ದ್ವಾರದಲ್ಲಿ ಬೋರ್ಡ್ ಹಾಕಿದ್ದು, ಭರ್ತಿ ಮಾಡಿದ ಗ್ಯಾಸ್ ಸಿಲಿಂಡರ್ (Full Cylinder) ತಂದುಕೊಟ್ಟರೆ, ಅಂತಹವರಿಗೆ ಒಂದು ಪ್ಲೇಟ್ ಚಿಕನ್ ಬಿರಿಯಾನಿ ಮತ್ತು ತಂಪು ಪಾನೀಯ ಉಚಿತವಾಗಿ ನೀಡಲಾಗುವುದು! ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡದಾದ್ಯಂತ ಗ್ಯಾಸ್ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಹೋಟೆಲ್‌ಗಳಿಗೆ ಸಕಾಲಕ್ಕೆ ಗ್ಯಾಸ್ ಸಿಗದ ಕಾರಣ ಅಡುಗೆ ಮಾಡುವುದು ಕಷ್ಟವಾಗಿದೆ.

Advertisement

ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ! 25 ವರ್ಷದ ಗರ್ಭಿಣಿ ಜನ್ಮ ನೀಡಿದ ಮಗುವಿನ ಕೆಜಿ ಎಷ್ಟು ಗೊತ್ತಾ?

ಗ್ಯಾಸ್ ಸಮಸ್ಯೆಯನ್ನು ಸಾರ್ವಜನಿಕರ ಗಮನಕ್ಕೆ ತರಲು ಮತ್ತು ಅದೇ ನೆಪದಲ್ಲಿ ಹೋಟೆಲ್ ಪ್ರಚಾರ ಪಡೆಯಲು ಈ ತಂತ್ರ ಹೂಡಲಾಗಿದೆ. ಹೋಟೆಲ್‌ನ ಈ ವಿಚಿತ್ರ ಆಫರ್ ನೋಡಿ ಜನ ನಕ್ಕರೆ, ಕೆಲವರು “ಬಿರಿಯಾನಿಗಾಗಿ ಯಾರು ತಾನೇ ಗ್ಯಾಸ್ ಸಿಲಿಂಡರ್ ಕೊಡ್ತಾರೆ ಸ್ವಾಮಿ?” ಎಂದು ತಮಾಷೆ ಮಾಡುತ್ತಿದ್ದಾರೆ.

ಗ್ಯಾಸ್ ಸಿಲಿಂಡರ್ ಇಲ್ಲದೆ ವ್ಯಾಪಾರ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ. ನಮಗೆ ಗ್ಯಾಸ್ ಸಿಗುತ್ತಿಲ್ಲ, ಅದಕ್ಕೇ ಈ ಆಫರ್ ಹಾಕಿದ್ದೇವೆ. ಯಾರಾದರೂ ನಿಜಕ್ಕೂ ಸಿಲಿಂಡರ್ ತಂದುಕೊಟ್ಟರೆ ನಾವು ಖಂಡಿತ ಬಿರಿಯಾನಿ ಕೊಡುತ್ತೇವೆ ಎಂದು ಹೋಟೆಲ್ ಸಿಬ್ಬಂದಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು