ಇಂದಿನ ಜೆನ್‌ಜಿ (Gen Z) ತಲೆಮಾರಿನ ಉದ್ಯೋಗಿಗಳು ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಬ್ಯಾಲೆನ್ಸ್ ಮಾಡುವುದರಲ್ಲಿ ನಿಸ್ಸೀಮರು. ಆದರೆ, ಈ ಯುವತಿಯ ಸಾಹಸ ಮಾತ್ರ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಆಫೀಸ್‌ನ ಅಧಿಕೃತ ವಿಡಿಯೋ ಕಾನ್ಫರೆನ್ಸ್ ಮೀಟಿಂಗ್‌ಗೆ ಈಕೆ ಮುಖಕ್ಕೆ ಬಿಳಿ ಬಣ್ಣದ ಫೇಸ್ ಪ್ಯಾಕ್ (Face Pack) ಹಚ್ಚಿಕೊಂಡೇ ಹಾಜರಾಗಿದ್ದಾಳೆ!
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಪ್ರಕಾರ, ಆಫೀಸ್ ಮೀಟಿಂಗ್ ನಡೆಯುತ್ತಿರುವಾಗ ಉದ್ಯೋಗಿಯೊಬ್ಬರು ತನ್ನ ಕ್ಯಾಮೆರಾ ಆನ್ ಮಾಡಿದ್ದಾರೆ. ಆಗ ಆಕೆ ಮುಖ ಪೂರ್ತಿ ಶೀಟ್ ಮಾಸ್ಕ್ ಅಥವಾ ಫೇಸ್ ಪ್ಯಾಕ್ ಹಾಕಿಕೊಂಡಿರುವುದು ಕಂಡುಬಂದಿದೆ. ಇದನ್ನು ಕಂಡು ಸಹೋದ್ಯೋಗಿಗಳು ಒಂದು ಕ್ಷಣ ದಂಗಾಗಿದ್ದಾರೆ.

ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ! 25 ವರ್ಷದ ಗರ್ಭಿಣಿ ಜನ್ಮ ನೀಡಿದ ಮಗುವಿನ ಕೆಜಿ ಎಷ್ಟು ಗೊತ್ತಾ?
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಉದ್ಯೋಗಿಯ ಈ ಅವತಾರ ಕಂಡು ಬಾಸ್ ಮೊದಲು ಶಾಕ್ ಆಗಿದ್ದಾರೆ, ನಂತರ ತಡೆಯಲಾರದೆ ನಕ್ಕಿದ್ದಾರೆ.ನಿನ್ನ ಸ್ಕಿನ್ ಕೇರ್ ಮುಖ್ಯ ಅನ್ನೋದು ಗೊತ್ತು, ಆದ್ರೆ ಮೀಟಿಂಗ್ ಸಮಯದಲ್ಲಿ ಇದು ಬೇಕಿತ್ತಾ?” ಎಂಬ ಧಾಟಿಯಲ್ಲಿ ತಮಾಷೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇಂಟರ್ನೆಟ್‌ನಲ್ಲಿ ಪರ-ವಿರೋಧ ಚರ್ಚೆ ಶುರುವಾಗಿದೆ. ಕೆಲವರು ಆಕೆಯ ಆತ್ಮವಿಶ್ವಾಸವನ್ನು ಮೆಚ್ಚಿ, ಕೆಲಸದ ಒತ್ತಡದ ನಡುವೆ ಸ್ಕಿನ್ ಕೇರ್ ಮಾಡಿಕೊಳ್ಳುವುದು ತಪ್ಪಲ್ಲ ಎಂದಿದ್ದಾರೆ. ಇನ್ನು ಕೆಲವರು ಆಫೀಸ್ ಮೀಟಿಂಗ್‌ಗೆ ಒಂದು ಗೌರವ ಇರಬೇಕು, ಇದು ಅತಿರೇಕದ ವರ್ತನೆ ಎಂದು ಟೀಕಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

