ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಾಗಲಿದೆ ಎಂಬ ಆತಂಕದಲ್ಲಿ ಗ್ರಾಹಕರು ಮುಗಿಬಿದ್ದು ಬುಕಿಂಗ್ ಮಾಡುತ್ತಿರುವುದನ್ನು ಗಮನಿಸಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಅಗತ್ಯವಿದ್ದಾಗ ಮಾತ್ರ ಸಿಲಿಂಡರ್ ಬುಕ್ ಮಾಡುವಂತೆ ಮನವಿ ಮಾಡಿದೆ.ಸಿಲಿಂಡರ್ ಖಾಲಿಯಾಗುವ ಮೊದಲೇ ಅಥವಾ ಆತಂಕದಿಂದ (Panic Booking) ಬುಕ್ ಮಾಡುವುದರಿಂದ ವಿತರಣಾ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗುತ್ತಿದೆ. ಇದು ನಿಜವಾದ ಅಗತ್ಯವಿರುವವರಿಗೆ ಸಿಲಿಂಡರ್ ಸಿಗದಂತೆ ಮಾಡಬಹುದು ಎಂದು ಸಂಸ್ಥೆ ಎಚ್ಚರಿಸಿದೆ.
ದೇಶದಲ್ಲಿ ಗೃಹಬಳಕೆಯ ಎಲ್‌ಪಿಜಿ ಸರಬರಾಜು ಸ್ಥಿರವಾಗಿದ್ದು, ಯಾವುದೇ ಅಡೆತಡೆ ಇಲ್ಲದೆ ವಿತರಣೆ ಮಾಡಲಾಗುತ್ತಿದೆ. ಯಾರೂ ಗಾಬರಿ ಪಡುವ ಅಗತ್ಯವಿಲ್ಲ ಎಂದು ತೈಲ ಕಂಪನಿಗಳು ಭರವಸೆ ನೀಡಿವೆ. ಪ್ಯಾನಿಕ್ ಬುಕಿಂಗ್ ತಡೆಯಲು ಸರ್ಕಾರವು ಎರಡು ಸಿಲಿಂಡರ್ ಬುಕಿಂಗ್‌ಗಳ ನಡುವಿನ ಅಂತರವನ್ನು 25 ದಿನಗಳಿಗೆ (ನಗರ ಪ್ರದೇಶ) ಮತ್ತು 45 ದಿನಗಳಿಗೆ (ಗ್ರಾಮೀಣ ಪ್ರದೇಶ) ಹೆಚ್ಚಿಸಿದೆ.

ಇದನ್ನೂ ಓದಿ: ಯುದ್ಧ ಮತ್ತು ರಮಝಾನ್ ಪರಿಣಾಮ: ಭಾರತದಲ್ಲಿ ಮೊಟ್ಟೆ ಬೆಲೆಯಲ್ಲಿ ಭಾರೀ ಇಳಿಕೆ
ಗ್ರಾಹಕರು ಏಜೆನ್ಸಿಗಳಿಗೆ ಭೇಟಿ ನೀಡುವ ಬದಲು ಆನ್‌ಲೈನ್ ಆ್ಯಪ್‌ಗಳು, ವ್ಯಾಟ್ಸಾಪ್ ಅಥವಾ ಐವಿಆರ್ (IVRS) ಮೂಲಕ ಬುಕ್ ಮಾಡಲು ಸೂಚಿಸಲಾಗಿದೆ. ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧದ ಭೀತಿಯಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ವದಂತಿಗಳು ಹಬ್ಬಿವೆ. ಇದರಿಂದಾಗಿ ಕಳೆದ ಕೆಲ ದಿನಗಳಲ್ಲಿ ಸಿಲಿಂಡರ್ ಬುಕಿಂಗ್ ಪ್ರಮಾಣ ಶೇ. 30ಕ್ಕೂ ಹೆಚ್ಚು ಏರಿಕೆಯಾಗಿದೆ. ಇದನ್ನು ನಿಯಂತ್ರಿಸಲು ಈಗ ಕಂಪನಿಗಳು ಅಡ್ವೈಸರಿ ಹೊರಡಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

