ಪ್ಯಾನ್ ಕಾರ್ಡ್ ಬಳಕೆದಾರರೇ ಎಚ್ಚರ: ಮಾಚ್ 31ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಕಾರ್ಡ್ ರದ್ದಾಗಲಿದೆ!

ದೆಹಲಿ: 2026ರ ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದ್ದು, ಇದಕ್ಕೂ ಮುನ್ನವೇ ಪ್ಯಾನ್ (PAN) ಮತ್ತು ಆಧಾರ್ (Aadhaar) ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಇದರೊಂದಿಗೆ ದೇಶದಲ್ಲಿ ಆಧಾರ್ ಕಾರ್ಡ್ ಹೊಂದಿರುವವರ ಸಂಖ್ಯೆ ದಾಖಲೆಯ 134 ಕೋಟಿ ತಲುಪಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

2026ರ ಮಾರ್ಚ್ 31 ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಅಂತಿಮ ಗಡುವು ನೀಡಲಾಗಿದೆ. ನಿಗದಿತ ಸಮಯದೊಳಗೆ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ‘ಇನ್ ಆಪರೇಟಿವ್’ (Inactive) ಆಗಲಿದೆ. ಇದರಿಂದ ಬ್ಯಾಂಕ್ ವ್ಯವಹಾರ, ಐಟಿ ರಿಟರ್ನ್ಸ್ ಸಲ್ಲಿಕೆ ಮತ್ತು ಹೊಸ ಸಾಲ ಪಡೆಯಲು ತೊಂದರೆಯಾಗಲಿದೆ.

Advertisement

ಇದನ್ನೂ ಓದಿ: ಟೋಲ್ ಕಳ್ಳಾಟಕ್ಕೆ ಬೀಳಲಿದೆ ಬ್ರೇಕ್: ಇನ್ಮುಂದೆ ಟೋಲ್ ಪಾವತಿಸದೆ ಹೋದ್ರೆ ಬೀಳುತ್ತೆ ಡಬಲ್ ದಂಡ!

ಈಗಾಗಲೇ ಲಿಂಕ್ ಮಾಡದವರಿಗೆ ನಿಗದಿತ ಶುಲ್ಕದೊಂದಿಗೆ ಲಿಂಕ್ ಮಾಡಲು ಅವಕಾಶ ನೀಡಲಾಗುತ್ತಿದೆ.ಭಾರತದ ಡಿಜಿಟಲ್ ಗುರುತಿನ ಚೀಟಿ ಆಧಾರ್ ಈಗ 134 ಕೋಟಿ ಜನರನ್ನು ತಲುಪಿದೆ.ಸೈಬರ್ ದಾಳಿಗಳನ್ನು ತಡೆಯಲು ಅಂತರರಾಷ್ಟ್ರೀಯ ಮಟ್ಟದ ಬಹುಹಂತದ ಭದ್ರತೆಯನ್ನು ಸರ್ವರ್‌ಗಳಿಗೆ ಒದಗಿಸಲಾಗಿದೆ.ಕೇವಲ ಬಯೋಮೆಟ್ರಿಕ್ ಮಾತ್ರವಲ್ಲದೆ, ಫೇಸ್ ಆಥೆಂಟಿಕೇಶನ್ (ಮುಖ ಗುರುತಿಸುವಿಕೆ) ಮತ್ತು ಐರಿಸ್ ಸ್ಕ್ಯಾನ್ (ಕಣ್ಣಿನ ಪಾಪೆ ಸ್ಕ್ಯಾನ್) ಮೂಲಕ ವಂಚನೆಗಳಿಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು