ಉಡುಪಿ: ತೆಂಗಿನಕಾಯಿ ಬಾಕಿ ಬಿಲ್ ವಿಚಾರ: ಅಕ್ಕಪಕ್ಕದ ಅಂಗಡಿ ಮಾಲೀಕರ ನಡುವೆ ಜಗಳ: ಹಣ್ಣುಗಳು ನಾಶ

udupi-shop-dispute-tender-coconut-bill-fight

ಉಡುಪಿ: ಬಾಕಿ ಬಿಲ್ ವಿಚಾರವಾಗಿ ಸಂತೇಕಟ್ಟೆಯಲ್ಲಿ ಪಕ್ಕದ ಎರಡು ಅಂಗಡಿ ಮಾಲೀಕರ ನಡುವೆ ಉಂಟಾದ ವಾಗ್ವಾದ ತೀವ್ರ ಗಲಾಟೆಗೆ ತಿರುಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಹಣ್ಣು ಅಂಗಡಿ ಮಾಲೀಕ ಮತ್ತು ಪಕ್ಕದ ಆಪ್ಟಿಕಲ್ ಅಂಗಡಿಗೆ ಸಂಬಂಧಿಸಿದ ಇಬ್ಬರ ನಡುವೆ ಈ ಜಗಳ ನಡೆದಿದೆ. ಆಪ್ಟಿಕಲ್ ಅಂಗಡಿಗೆ ಸೇರಿದವರು ಆಗಾಗ ತೆಂಗಿನಕಾಯಿ ಖರೀದಿಸಿ ಹಣವನ್ನು ನಂತರ ನೀಡುವುದಾಗಿ ಹೇಳುತ್ತಿದ್ದರು ಎಂದು ತಿಳಿದುಬಂದಿದೆ.

Advertisement

ಈ ರೀತಿ ಸುಮಾರು 20 ತೆಂಗಿನಕಾಯಿಗಳ ಹಣ ನೀಡದೆ ಬಾಕಿ ಇರಿಸಿದ್ದು, ಇದನ್ನು ಹಣ್ಣಿನ ಅಂಗಡಿ ಮಾಲೀಕ ಕೇಳಿದಾಗ ವಾಗ್ವಾದ ಶುರುವಾಯಿತು. ಈ ವಾಗ್ವಾದವು ಕೆಲವೇ ಕ್ಷಣಗಳಲ್ಲಿ ಹೊಡೆದಾಟಕ್ಕೆ ತಿರುಗಿತು.

ಇದನ್ನೂ ಓದಿ: ಬಜ್ಪೆ: ಕಾರಿನಲ್ಲಿ ಗೋವುಗಳ ಕ್ರೂರ ಸಾಗಾಟ, ಇಬ್ಬರು ಆರೋಪಿಗಳ ಬಂಧನ

ಈ ವೇಳೆ ಆಪ್ಟಿಕಲ್ ಅಂಗಡಿಗೆ ಸಂಬಂಧಿಸಿದ ಮಹಿಳೆ ಹಣ್ಣು ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ಹಣ್ಣುಗಳನ್ನು ಹಾನಿಗೊಳಿಸಿದರೆಂದು ಆರೋಪಿಸಲಾಗಿದೆ. ಗಲಾಟೆಯ ನಡುವೆ ಒಬ್ಬ ವ್ಯಕ್ತಿ ತೀಕ್ಷ್ಣ ಆಯುಧ ಹಿಡಿದು ಕಾಣಿಸಿಕೊಂಡಿದ್ದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಯಿತು.

ಸ್ಥಳದಲ್ಲಿದ್ದ ಜನರು ತಕ್ಷಣ ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿ, ಆ ವ್ಯಕ್ತಿಯಿಂದ ಆಯುಧವನ್ನು ವಶಪಡಿಸಿಕೊಂಡು ಯಾವುದೇ ದೊಡ್ಡ ಅನಾಹುತ ತಪ್ಪಿಸಿದರು ಎಂದು ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು