ಕೊಲಂಬಿಯಾದಲ್ಲಿ ಭೀಕರ ವಿಮಾನ ದುರಂತ: 110 ಸೈನಿಕರಿದ್ದ ಮಿಲಿಟರಿ ವಿಮಾನ ಪತನ; ಎಲ್ಲರೂ ಸಾವನ್ನಪ್ಪಿರುವ ಭೀತಿ!

ಬೊಗೋಟಾ: ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ ಇಂದು (ಮಾ. 24) ಕರುಳು ಚುರುಗುಟ್ಟುವಂತಹ ವಿಮಾನ ಅಪಘಾತ ಸಂಭವಿಸಿದೆ. ದೇಶದ ವಾಯುಪಡೆಗೆ ಸೇರಿದ ಹರ್ಕ್ಯುಲಸ್ C-130 (Hercules C-130) ಮಿಲಿಟರಿ ವಿಮಾನವು ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ನೂರಾರು ಸೈನಿಕರ ಭವಿಷ್ಯ ಈಗ ಆತಂಕದಲ್ಲಿದೆ.

ವಿಮಾನವು ಟೇಕ್‌ಆಫ್ ಆದ ತಕ್ಷಣ ತಾಂತ್ರಿಕ ದೋಷ ಅಥವಾ ಅನಿರೀಕ್ಷಿತ ಕಾರಣದಿಂದ ಅಪಘಾತಕ್ಕೀಡಾಗಿದೆ. ವಿಮಾನವು ಸಂಪೂರ್ಣವಾಗಿ ಜಖಂಗೊಂಡಿದೆ ಎಂದು ವರದಿಗಳು ತಿಳಿಸಿವೆ.ವಿಮಾನದಲ್ಲಿ ಸುಮಾರು 110 ಸೈನಿಕರು ಪ್ರಯಾಣಿಸುತ್ತಿದ್ದರು. ದುರದೃಷ್ಟವಶಾತ್, ಅಪಘಾತದ ತೀವ್ರತೆ ಗಮನಿಸಿದರೆ ವಿಮಾನದಲ್ಲಿದ್ದ ಯಾರೂ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗಿದೆ.

Advertisement

ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಇಳಿಕೆ: ಡೊನಾಲ್ಡ್ ಟ್ರಂಪ್ ಸುಳಿವು ಬೆನ್ನಲ್ಲೇ ಕುಸಿದ ಆಯಿಲ್ ದರ; ಗ್ರಾಹಕರಿಗೆ ನಿರಾಳ!

ಈ ಭೀಕರ ದುರಂತಕ್ಕೆ ತಾಂತ್ರಿಕ ದೋಷವೇ ಕಾರಣವೇ ಅಥವಾ ಇಂಧನ ಸೋರಿಕೆಯೇ ಎಂಬ ಬಗ್ಗೆ ಮಿಲಿಟರಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.ಅಪಘಾತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಪಡೆಗಳು ಅವಶೇಷಗಳ ಶೋಧ ಕಾರ್ಯವನ್ನು ತೀವ್ರಗೊಳಿಸಿವೆ. ಕೊಲಂಬಿಯಾ ಸರ್ಕಾರವು ಈ ಘಟನೆಯನ್ನು ರಾಷ್ಟ್ರೀಯ ಶೋಕ ಎಂದು ಪರಿಗಣಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು