SSLC ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ! 625ರಿಂದ 525ಕ್ಕೆ ಇಳಿಕೆಯಾದ ಒಟ್ಟು ಅಂಕಗಳು; ತೃತೀಯ ಭಾಷೆಯ ಅಂಕಗಳಿಗೆ ಕೊಕ್

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಒಟ್ಟು ಅಂಕಗಳನ್ನು 625 ರಿಂದ 525 ಕ್ಕೆ ಇಳಿಕೆ ಮಾಡಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.

ಇನ್ನು ಮುಂದೆ ತೃತೀಯ ಭಾಷೆಗಳಾದ ಹಿಂದಿ, ಸಂಸ್ಕೃತ, ಉರ್ದು, ಅರೇಬಿಕ್, ಕೊಂಕಣಿ, ತುಳು ಮತ್ತು ಮರಾಠಿ ವಿಷಯಗಳ ಅಂಕಗಳನ್ನು ಒಟ್ಟು ಅಂಕಗಳಿಗೆ ಸೇರಿಸಲಾಗುವುದಿಲ್ಲ. ತೃತೀಯ ಭಾಷೆಯ ಪರೀಕ್ಷೆ ನಡೆಯಲಿದೆಯಾದರೂ, ಅದರಲ್ಲಿ ಗಳಿಸಿದ ಅಂಕಗಳ ಬದಲಿಗೆ ಅಂಕಪಟ್ಟಿಯಲ್ಲಿ ಗ್ರೇಡ್‌ (Grade) ಮಾತ್ರ ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.

Advertisement

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗಮನಕ್ಕೆ: ಮಾ. 30ರ ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ!

ವಿದ್ಯಾರ್ಥಿಗಳ ಅಂತಿಮ ಫಲಿತಾಂಶ ಮತ್ತು ರ್ಯಾಂಕ್ ಅನ್ನು ಕೇವಲ 525 ಅಂಕಗಳ (ಪ್ರಥಮ ಭಾಷೆ-125, ದ್ವಿತೀಯ ಭಾಷೆ-100 ಮತ್ತು ಮೂರು ಕೋರ್ ವಿಷಯಗಳು ತಲಾ 100) ಮೇಲೆ ಮಾತ್ರ ನಿರ್ಧರಿಸಲಾಗುವುದು.ಈ ಹೊಸ ನಿಯಮವು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ. ಕನ್ನಡ ಪರ ಸಂಘಟನೆಗಳ ದೀರ್ಘಕಾಲದ ಒತ್ತಾಯದ ಮೇರೆಗೆ ಹಿಂದಿ ಅಂಕಗಳನ್ನು ಕಡ್ಡಾಯ ಫಲಿತಾಂಶದಿಂದ ಹೊರಗಿಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು