ಮಂಗಳೂರು: ಬೋಯ್ರೆನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಏಪ್ರಿಲ್ 4ರಿಂದ 12ರವರೆಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ‘ಮಂಗಳೂರು ಉತ್ಸವ’ ಎಂಬ ಹೆಸರಿನ ಭವ್ಯ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಶುಕ್ರವಾರ ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಪ್ರತಿನಿಧಿ ಮಂಜು ಸುವರ್ಣ ಅವರು ಮಾಹಿತಿ ನೀಡಿದರು. ಡ್ಯಾನ್ಸ್ ಫೆಸ್ಟಿವಲ್ ಜೊತೆಗೆ ರಾಜ್ಯಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ಧೆ ಹಾಗೂ ಗಾಯನ ಸ್ಪರ್ಧೆಯನ್ನೂ ಈ ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ದಕ್ಷಿಣ ಕನ್ನಡ, ಉಡುಪಿ ಸೇರಿ 15 ಜಿಲ್ಲೆಗಳಲ್ಲಿ ಗಾಳಿ, ಗುಡುಗು ಮಿಂಚು ಸಹಿತ ಮಳೆ, ಯೆಲ್ಲೋ ಅಲರ್ಟ್
ಕಾರ್ಯಕ್ರಮದಲ್ಲಿ ಫುಡ್ ಫೆಸ್ಟಿವಲ್, ಸೆಲೆಬ್ರಿಟಿ ಪ್ರದರ್ಶನಗಳು, ಐಸ್ ಕ್ರೀಂ ಫೆಸ್ಟಿವಲ್, ಆಟೋ ಕಾರ್ನಿವಲ್, ಹಾಗೂ ಸಾರ್ವಜನಿಕರಿಗೆ ಮನರಂಜನೆ ನೀಡುವ ಅಮ್ಯೂಸ್ಮೆಂಟ್ ಪಾರ್ಕ್ ಸೇರಿದಂತೆ ಹಲವಾರು ಆಕರ್ಷಣೆಗಳು ಇರಲಿವೆ ಎಂದು ಅವರು ತಿಳಿಸಿದರು.
ಇನ್ನು ಕಳೆದ 25 ವರ್ಷಗಳಿಂದ ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬೋಯ್ರೆನ್ ಡ್ಯಾನ್ಸ್ ಅಕಾಡೆಮಿ, ಅನೇಕ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದು, ಅವರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ್ ಕಡ್ರಿ, ಪ್ರತೀಶ್ ಗೌರೀಶ್, ಕಿಶೋರ್ ಕುಮಾರ್ ಹಾಗೂ ಚಾರ್ವಿ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

