ನಮ್ಮಲ್ಲಿ ಅನೇಕರಿಗೆ ಊಟದ ನಂತರ ಸಿಹಿ ತಿಂಡಿ ತಿನ್ನುವ ಅಭ್ಯಾಸವಿರುತ್ತದೆ. ಆದರೆ ಸಕ್ಕರೆಯಿಂದ ಬರುವ ಆರೋಗ್ಯ ಸಮಸ್ಯೆಗಳಿಗೆ ಹೆದರಿ ಅನೇಕರು ಇದನ್ನು ಬಿಟ್ಟುಬಿಡುತ್ತಾರೆ. ಆದರೆ, ನೈಸರ್ಗಿಕವಾಗಿ ಸಿಹಿಯಾದ ಮತ್ತು ಪೌಷ್ಟಿಕಾಂಶಯುಕ್ತ ಪದಾರ್ಥಗಳನ್ನು ಬಳಸಿ ಆರೋಗ್ಯಕರವಾಗಿ ಸಿಹಿಯನ್ನು ಸವಿಯಬಹುದು.
ಐದು ಸುಲಭ ಮತ್ತು ಆರೋಗ್ಯಕರ ಡೆಸರ್ಟ್ ಬೌಲ್ಗಳು:

ಕಾಫಿ ಕೋಕನಟ್ ಪ್ರೋಟೀನ್ ಬೌಲ್ (Coffee Coconut Protein Bowl):
ತೆಂಗಿನ ಹಾಲು ಮತ್ತು ಚಿಯಾ ಬೀಜಗಳನ್ನು ಬಳಸಿ ಮಾಡುವ ಕ್ರೀಮಿ ಡೆಸರ್ಟ್ ಇದು. ಇದಕ್ಕೆ ಸ್ವಲ್ಪ ಕಾಫಿ ಪುಡಿ ಸೇರಿಸಿದರೆ ಅದ್ಭುತ ರುಚಿ ನೀಡುತ್ತದೆ.
ರೋಸ್ ಆಲ್ಮಂಡ್ ಪ್ರೋಟೀನ್ ಬೌಲ್ (Rose Almond Protein Bowl):
ಬಾದಾಮಿ ಹಾಲು, ಚಿಯಾ ಬೀಜಗಳು ಮತ್ತು ಗುಲಾಬಿ ನೀರನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಸಸ್ಯ ಆಧಾರಿತ ಪ್ರೋಟೀನ್ ಪಡೆಯಲು ಇದು ಉತ್ತಮ ಆಯ್ಕೆ.
ಚಾಕೊಲೇಟ್ ಬನಾನಾ ಓಟ್ಸ್ ಬೌಲ್ (Chocolate Banana Oats Bowl):
ಬಾಳೆಹಣ್ಣು ಮತ್ತು ಓಟ್ಸ್ ಬಳಸಿ ತಯಾರಿಸುವ ಈ ಬೌಲ್ ರಾತ್ರಿಯ ಸಮಯಕ್ಕೆ ಸೂಕ್ತ. ಇದು ನೈಸರ್ಗಿಕವಾಗಿ ಸಿಹಿಯಾಗಿರುತ್ತದೆ ಮತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
ಇದನ್ನೂ ಓದಿ: “ನನ್ನ ಅಪ್ಪನ ಸಕ್ಕರೆ ಚಟ ಬಿಡಿಸಿ”: ಪತ್ರ ಬರೆದ ಯುವಕನಿಗೆ ಪ್ರಧಾನಿ ಮೋದಿ ಕೊಟ್ಟ ಉತ್ತರಕ್ಕೆ ಜನರು ಫಿದಾ
ಬೆರ್ರಿ ಲೆಮನ್ ಮೊಸರು ಬೌಲ್ (Berry Lemon Yoghurt Bowl):
ಮೊಸರು, ಬೆರ್ರಿಗಳು ಮತ್ತು ನಿಂಬೆ ಹಣ್ಣಿನ ಸಿಪ್ಪೆಯ ತುರಿ (Zest) ಬಳಸಿ ಮಾಡುವ ಈ ಡೆಸರ್ಟ್ ಬೇಸಿಗೆ ಕಾಲಕ್ಕೆ ತುಂಬಾ ಹಿತವಾಗಿರುತ್ತದೆ.
ಡೇಟ್ ಕ್ಯಾರಮೆಲ್ ಮೊಸರು ಬೌಲ್ (Date Caramel Yoghurt Bowl):
ಖರ್ಜೂರದ ಪೇಸ್ಟ್ ಮತ್ತು ಮೊಸರನ್ನು ಬೆರೆಸಿ ಮಾಡುವ ಈ ತಿಂಡಿ ಅತಿ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

