ಬೆಂಗಳೂರು: ಆನ್‌ಲೈನ್ ಮೂಲಕ ಆಹಾರ ತರಿಸಿಕೊಳ್ಳುವ ಗ್ರಾಹಕರಿಗೆ ಡೆಲಿವರಿ ಶುಲ್ಕ ಮತ್ತು ಇತರೆ ಚಾರ್ಜ್‌ಗಳ ಬಿಸಿ ತಟ್ಟುತ್ತಲೇ ಇರುತ್ತದೆ. ಆದರೆ ಈ ಬಾರಿ ಸ್ವತಃ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರೇ ಸ್ವಿಗ್ಗಿ (Swiggy) ವಿಧಿಸಿರುವ ಅತಿಯಾದ ಶುಲ್ಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಸುಮಲತಾ ಅಂಬರೀಶ್ ಅವರು ಬೆಂಗಳೂರಿನ ಖ್ಯಾತ ‘ರಾಮೇಶ್ವರಂ ಕೆಫೆ’ಯಿಂದ (Rameshwaram Cafe) ಪೊಂಗಲ್ ಆರ್ಡರ್ ಮಾಡಿದ್ದರು. ಅವರು ಆರ್ಡರ್ ಮಾಡಿದ ಪೊಂಗಲ್ ಬೆಲೆ ಕೇವಲ 115 ರೂಪಾಯಿ. ಆದರೆ ಸ್ವಿಗ್ಗಿ ಇದಕ್ಕೆ ಡೆಲಿವರಿ ಚಾರ್ಜ್, ಪ್ಲಾಟ್‌ಫಾರ್ಮ್ ಫೀ ಮತ್ತು ಜಿಎಸ್‌ಟಿ ಸೇರಿದಂತೆ ಬರೋಬ್ಬರಿ 158 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿದೆ. ಅಂತಿಮವಾಗಿ 115 ರೂಪಾಯಿಯ ತಿಂಡಿಗೆ ಅವರು 273 ರೂಪಾಯಿ ಪಾವತಿಸಬೇಕಾಯಿತು.

ಇಲ್ಲಿದೆ ನೋಡಿ ಪೋಸ್ಟ್;
Good morning !
Had placed an order on #Swiggy & noticed that they charge more than double the order’s actual price . Is this common practise/allowed/ethical ?? I was charged 273 Rs for a 115 Rs item !@Swiggy@RameshwaramCafe pic.twitter.com/pa8tjsK4lg
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) March 27, 2026
ಈ ಬಗ್ಗೆ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸ್ವಿಗ್ಗಿ ರಸೀದಿಯ ಫೋಟೋ ಹಂಚಿಕೊಂಡಿರುವ ಅವರು, “ಆಹಾರದ ಬೆಲೆಗಿಂತ ಡಬಲ್ ಚಾರ್ಜ್ ಮಾಡುವುದು ಎಷ್ಟು ಸರಿ? ಇದು ಎಥಿಕಲ್ ಆಗಿದೆಯೇ? ಗ್ರಾಹಕರಿಗೆ ಪಾರದರ್ಶಕವಾದ ಬೆಲೆ ವ್ಯವಸ್ಥೆ ಇರಬೇಕು” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ನಂದಿನಿ ಲೇಔಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ; ಇಬ್ಬರು ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪಾರು!
ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಹಲವು ಗ್ರಾಹಕರು ತಮಗೂ ಇಂತಹ ಅನುಭವವಾಗಿದೆ ಎಂದು ಸ್ವಿಗ್ಗಿ ಮತ್ತು ಜೊಮ್ಯಾಟೋ ವಿರುದ್ಧ ಕಮೆಂಟ್ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

