ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಒಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
ಐಪಿಎಲ್‌ನಲ್ಲಿ 268 ಇನಿಂಗ್ಸ್‌ಗಳನ್ನು ಆಡಿರುವ ಕೊಹ್ಲಿ, ಗುರಿ ಬೆನ್ನಟ್ಟುವ (ಚೇಸಿಂಗ್) ವೇಳೆ 4,000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಅಪರೂಪದ ಸಾಧನೆ ಮಾಡಿದ್ದಾರೆ. ಐಪಿಎಲ್‌ನಲ್ಲಿ ಇತರ ಯಾವುದೇ ಬ್ಯಾಟರ್ ಚೇಸಿಂಗ್ ಸಂದರ್ಭದಲ್ಲೇ 4 ಸಾವಿರ ರನ್ ಗಳಿಸಿದ ದಾಖಲೆ ಇಲ್ಲ.

ಹೈದರಾಬಾದ್ ನೀಡಿದ್ದ 202 ರನ್ ಗುರಿ ಬೆನ್ನತ್ತುವ ವೇಳೆ ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ ವಿಕೆಟ್‌ನ್ನು ಬೇಗನೆ ಕಳೆದುಕೊಂಡರೂ, ಕೊಹ್ಲಿ ಕ್ರೀಸ್‌ನಲ್ಲಿ ನೆಲೆಸಿಕೊಂಡು ಸ್ಥಿರ ಆಟವಾಡಿದರು. ದೇವದತ್ ಪಡಿಕ್ಕಲ್ ಹಾಗೂ ನಾಯಕ ರಜತ್ ಪಾಟೀದಾರ್ ಜೊತೆಗೆ ಮಹತ್ವದ ಜೊತೆಯಾಟ ಕಟ್ಟಿದ ಅವರು ಅರ್ಧಶತಕದೊಂದಿಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಇದನ್ನೂ ಓದಿ: IPL: ಗೆಲುವಿನ ಶುಭಾರಂಭ ಮಾಡಿದ RCB, ಸನ್ ರೈಸರ್ಸ್ ವಿರುದ್ಧ ಭರ್ಜರಿ ಗೆಲುವು
ಚೇಸಿಂಗ್‌ನಲ್ಲಿ 4 ಸಾವಿರ ರನ್ ಪೂರೈಸಿದ ಕೊಹ್ಲಿ ಬಳಿಕ, ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್ (3,285 ರನ್) ಹಾಗೂ ರೋಹಿತ್ ಶರ್ಮಾ (3,238 ರನ್) ಕ್ರಮವಾಗಿ ಮುಂದಿನ ಸ್ಥಾನದಲ್ಲಿದ್ದಾರೆ.
ಒಟ್ಟಾರೆ, ಐಪಿಎಲ್ 2026ರ ಮೊದಲ ಪಂದ್ಯದಲ್ಲೇ ಕೊಹ್ಲಿ ಬ್ಯಾಟ್‌ನಿಂದ ಮಿಂಚಿ, ಅಭಿಮಾನಿಗಳಿಗೆ ಸಂಭ್ರಮ ನೀಡುವುದರ ಜೊತೆಗೆ ಐತಿಹಾಸಿಕ ದಾಖಲೆಗೂ ಸಾಕ್ಷಿಯಾದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

